ಗೋವಾ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಹಾಗೂ ವಿಮಾನವೊಂದರ ಸಿಬ್ಬಂದಿಯ ನಡುವೆ ಮಾತಿನ ಚಕಮಕಿ ನಡೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಗೋವಾದಿಂದ ಮುಂಬಯಿಗೆ ತೆರಳಬೇಕಿದ್ದ ಗೋಏರ್ ವಿಮಾನವೊಂದರ ಹಾರಾಟ ರದ್ದಾಗಿದೆ ಎಂದು ಸಿಬ್ಬಂದಿ ವರ್ಗ ಪ್ರಯಾಣಿಕರಿಗೆ ತಿಳಿಸುತ್ತಲೇ ಈ ಚಕಮಕಿ ಆರಂಭಗೊಂಡಿದೆ. ವಿಮಾನದ ಟೇಕಾಫ್‌ಗೆ ಹತ್ತು ನಿಮಿಷಗಳ ಮುಂಚೆ ಈ ನೋಟಿಫೀಕೇಶನ್ ಕೊಡಲಾಗಿದೆ.
ಹೀಗೆ ದಿಢೀರನೇ ವಿಮಾನದ ಹಾರಾಟ ರದ್ದಾದ ಕಾರಣದಿಂದ ಮುಂಬಯಿಗೆ ತೆರಳಲು ಪರ್ಯಾಯ ವ್ಯವಸ್ಥೆಗಳನ್ನು ತಕ್ಷಣ ಮಾಡಿಕೊಳ್ಳಲು ಸಾಧ್ಯವಾಗದೇ ಪ್ರಯಾಣಿಕರು ಸಿಟ್ಟಿಗೆದ್ದಿದ್ದಾರೆ.
ತಮಗಾದ ಈ ಅನಾನುಕೂಲದಿಂದಾಗಿ ಪ್ರಯಾಣಿಕರು ಟ್ವಿಟರ್‌ನಲ್ಲಿ ತಮ್ಮ ಸಿಟ್ಟು ಕಾರಿಕೊಂಡಿದ್ದಾರೆ.
https://twitter.com/pramod_writes/status/1646067433327968256?ref_src=twsrc%5Etfw%7Ctwcamp%5Etweetembed%7Ctwterm%5E1646067433327968256%7Ctwgr%5Eb43bfe73af4cc3825fdd0b2a54adf8e6867e826a%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fsir-jhoot-mat-bolo-aap-video-of-fight-between-passengers-goair-staff-goes-viral-allegedly-after-airline-cancels-goa-to-mumbai-flight