liquor Price Hike : ‘ಎಣ್ಣೆ’ ರೇಟ್ ಜಾಸ್ತಿ ಮಾಡಿದ್ರೆ ‘ಉಗ್ರ ಹೋರಾಟ’ : ಎಚ್ಚರಿಕೆ ನೀಡಿದ ಮದ್ಯಪಾನ ಪ್ರಿಯರ ಸಂಘದ ಅಧ್ಯಕ್ಷ

ಬೆಂಗಳೂರು : ಮದ್ಯದ ದರ ಹೆಚ್ಚಳ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ ಘೋಷಿಸಿದ್ದು, ಸರ್ಕಾರದ ನಿರ್ಧಾರಕ್ಕೆ ಮದ್ಯ ಪ್ರಿಯರು ಸಿಡಿದೆದ್ದಿದ್ದಾರೆ.

ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ಮದ್ಯಪ್ರಿಯರ ಸಂಘದಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಒಂದು ವೇಳೆ ದರ ಹೆಚ್ಚಳ ಮಾಡಿದ್ರೆ ಉಗ್ರ ಹೋರಾಟ ಮಾಡುವುದಾಗಿ ಕರ್ನಾಟಕ ಮದ್ಯಪಾನ ಪ್ರಿಯರ ಸಂಘ ಎಚ್ಚರಿಕೆಯನ್ನು ನೀಡಿದೆ.

ಬಜೆಟ್ ನಲ್ಲಿ ಅಬಕಾರಿ ಸುಂಕವನ್ನು ಶೇ.20ರಷ್ಟು ಹೆಚ್ಚಳ ಮಾಡಲಾಗಿದ್ದು, ಮದ್ಯದ ದರ ಹೆಚ್ಚಳ ಮಾಡಿದ್ರೆ ನಾವು ಹೋರಾಟ ಮಾಡುತ್ತೇವೆ ಎಂದು ಮದ್ಯಪ್ರಿಯರ ಸಂಘದ ರಾಜ್ಯಾಧ್ಯಕ್ಷ ವೆಂಕಟೇಶ್ ಗೌಡ ಎಚ್ಚರಿಕೆ ನೀಡಿದ್ದಾರೆ. ಪ್ರತಿ ಬಜೆಟ್ ನಲ್ಲಿ ಮದ್ಯದ ದರ ಹೆಚ್ಚಳ ಮಾಡಿದ್ರೆ ನಾವು ಏನು ಮಾಡಬೇಕು. ಒಂದು ವೇಳೆ ದರ ಹೆಚ್ಚಳವಾದ್ರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.

ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದ್ದು, ಇನ್ನೊಂದು ವಾರದಲ್ಲಿ ಮದ್ಯದ ದರ ಹೆಚ್ಚಳವಾಗುವ ಸಾಧ್ಯತೆ ಇದೆ.ಸಿಎಂ ಸಿದ್ದರಾಮಯ್ಯ ಬಜೆಟ್ ನಲ್ಲಿ ಅಬಕಾರಿ ಸುಂಕ ಹೆಚ್ಚಳ ಮಾಡುವುದಾಗಿ ಹೇಳಿದ್ದರು. ಅದರಂತೆ ಇನ್ನೊಂದು ವಾರದಲ್ಲಿ ಮದ್ಯದ ಬೆಲೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಅಬಕಾರಿ ಸುಂಕ ಶೇ. 20 ರಷ್ಟು ಹೆಚ್ಚಳ ಮಾಡಲಾಗುತ್ತಿದ್ದು, ಇದರಿಂದ ಮದ್ಯದ ಬೆಲೆ ದುಬಾರಿಯಾಗಲಿದೆ.

ಅಬಕಾರಿ ಇಲಾಖೆಯು ಈಗಾಗಲೇ ಹೊಸ ಮದ್ಯದ ದರ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದು, ಬಿಯರ್ ಗಳ ಮೇಲೆ ಹೆಚ್ಚುವರಿಯಾಗಿ 10 ಪರ್ಸೆಂಟ್ ಸುಂಕ ವಿಧಿಸಲಾಗುತ್ತಿದೆ. ಕನಿಷ್ಟ 20 ರೂ.ನಿಂದ 30 ರೂ.ವರೆಗೆ ಹೆಚ್ಚಳ ಮಾಡಲಾಗುತ್ತದೆ. ಬ್ರಾಂಡೆಡ್ ಮದ್ಯದ ಬೆಲೆ 400 ರೂ.ನಿಂದ900 ರೂ.ವರೆಗೆ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read