BIG NEWS : ‘ಕಾಂತಾರ-2’ ಚಿತ್ರದಲ್ಲಿ ದೈವಾರಾಧನೆ ಪ್ರದರ್ಶನವಾದರೆ ಉಗ್ರ ಹೋರಾಟ ; ಹಿಂದೂ ಸಂಘಟನೆಗಳ ಎಚ್ಚರಿಕೆ

ಬೆಂಗಳೂರು : ಕಾಂತಾರ-2 ನಲ್ಲಿ ದೈವಾರಾಧನೆ ಪ್ರದರ್ಶನವಾದರೆ ಉಗ್ರ ಹೋರಾಟ ನಡೆಸುವುದಾಗಿ ಬಜರಂಗದಳ ಹಾಗೂ ವಿಹೆಚ್ ಪಿ ( ವಿಶ್ವಹಿಂದೂ ಪರಿಷತ್) ಎಚ್ಚರಿಕೆ ನೀಡಿದೆ.

ಕಾಂತಾರ-1 ಸಿನಿಮಾದ ಸಕ್ಸಸ್ ನಲ್ಲಿರುವ ರಿಷಬ್ ಶೆಟ್ಟಿ ಕಾಂತಾರ-2 ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಎಲ್ಲರೂ ಕಾಂತಾರ-2 ಸಿನಿಮಾದ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ. ಇದರ ನಡುವೆ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ.

‘’ಸಿನಿಮಾಗೆ ತಡೆಯೊಡ್ಡಬೇಕು ಮತ್ತು ಕಾಂತಾರ ಸಿನಿಮಾದಲ್ಲಿ ದೈವದ ಅಣಕು ವೇಷ ಹಾಕಿರುವ ರಿಷಬ್ ಮತ್ತು ಶಿವದೂತ ಗುಳಿಗೆ ನಾಟಕದಲ್ಲಿ ದೈವದ ಅಣಕು ವೇಷ ಧರಿಸಿರುವ ಸ್ವರಾಜ್ ಮತ್ತು ಸ್ಟಾರ್ ಸುವರ್ಣ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಾವೇರಿ ಧಾರಾವಾಹಿಯಲ್ಲಿ ದೈವದ ಅಣಕು ವೇಷ ಧರಿಸಿರುವ ಪ್ರಶಾಂತ್ ಸಿಕೆ ಮೇಲೆ ದಲಿತ ದೌರ್ಜನ್ಯ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕಾಗಿ ಕೇಳಿಕೊಳ್ಳುತ್ತೇವೆ’’ ಎಂದು ತುಳುನಾಡ ದೈವಾರಾಧನಾ ಸಂರಕ್ಷಣಾ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.

ಇದಕ್ಕೆ ಬಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್ ಸಾಥ್ ನೀಡಿದ್ದು, ಮುಂದೆ ಟಿವಿ ಹಾಗೂ ಸಿನಿಮಾಗಳಲ್ಲಿ ದೈವಾರಾಧನೆ ಪ್ರದರ್ಶನವಾಗಬಾರದು, ಆದರೆ ಮುತ್ತಿಗೆ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ದೈವಾರಾಧನೆಯು ಯಾವುದೇ ನಾಟಕ, ಸಿನಿಮಾ, ಧಾರವಾಹಿ, ಯಕ್ಷಗಾನದಲ್ಲೂ ಪ್ರದರ್ಶನ ಆಗಬಾರದು, ಆದರೆ ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read