Video | ಕೂತಲ್ಲಿಗೇ ಊಟ ಕೇಳುವ ಪರಮ ಸೋಂಬೇರಿ ಈ ಕುರಿ

ನಮ್ಮಲ್ಲಿನ ಸೋಂಬೇರಿತನವನ್ನು ಪ್ರಚೋದಿಸುವ ವಿಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರು ಇದನ್ನು ನೋಡಿ ತಮಗೆ ತಾವೇ ರಿಲೇಟ್ ಮಾಡಿಕೊಳ್ಳುತ್ತಿದ್ದಾರೆ.

ಸೋಂಬೇರಿ ಕುರಿಯೊಂದು ಯಾವಾಗಲೂ ನಿದ್ರೆ ಮಾಡುತ್ತಲೇ ಇದ್ದು, ಎದ್ದು ನಿಂತು ಆಹಾರ ಸವಿಯಲು ಸಹ ಆಗದಷ್ಟು ಆಲಸ್ಯ ಮೆಟ್ಟಿಕೊಂಡಿದೆ. ರೆಡ್ಡಿಟ್‌ನಲ್ಲಿ ಈ ರೀಲ್ ಪೋಸ್ಟ್ ಮಾಡಲಾಗಿದ್ದು, “ಈ ಸೋಂಬೇರಿ ಕುರಿ ಇರುವುದೇ ಸುಮ್ಮನೇ ಮಲಗಿದ್ದಲ್ಲೇ ತಿಂದುಂಡು ಇರಲು,” ಎಂದು ಕ್ಯಾಪ್ಷನ್ ನೀಡಲಾಗಿದೆ.

7.5 ಸಾವಿರ್‌ ಅಪ್‌ವೋಟ್‌ಗಳನ್ನು ಪಡೆದ ಈ ವಿಡಿಯೋವನ್ನು ನೋಡಿದ ನೆಟ್ಟಿಗರು, “ಯಾವುದೇ ಕೆಲಸ ಮಾಡದೇ ಇಷ್ಟು ನಿರಾಳವಾಗಿ ಬದುಕಲೂ ಸಹ ಅದೃಷ್ಟ ಬೇಕು. ಅಂಥ ಅದೃಷ್ಟವಂತ ಈ ಕುರಿ,” ಎಂಬ ಅರ್ಥದಲ್ಲಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.

“ನಾನು ಕೆಲಸ ಕಳೆದುಕೊಳ್ಳುತ್ತಿದ್ದೇನೆ. ಹಾಗಾಗಿ ಇದು ನನ್ನ ಮುಂದಿನ ಸೋಮವಾರವಾಗಿರಬಹುದು,” ಎಂದು ನೆಟ್ಟಿಗರೊಬ್ಬರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.

Lazy sheep is just here to vibe and munch while just laying there.
byu/ilovetoeatpussy_ inAnimalsBeingDerps

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read