ಚಂಡೀಗಢ: ವ್ಯಕ್ತಿಯೋರ್ವ ತನ್ನ 17 ವರ್ಷದ ಮಗಳ ಮೇಲೆ ಅನುಮಾನಪಟ್ಟು ಆಕೆಯ ಕೈ-ಕಾಲು ಕಟ್ಟಿ ಕಾಲುವೆಗೆ ತಳ್ಳಿರುವ ಘಟನೆ ಛಂಡೀಗಢದಲ್ಲಿ ನಡೆದಿದೆ.
17 ವರ್ಷದ ಬಾಲಕಿ ಶಾಲೆ ಬಿಟ್ತಿದ್ದಳು. ನಾಲ್ಕು ಜನ ಹೆಣ್ಣುಮಕ್ಕಳ ಪೈಕಿ ಆಕೆ ದೊಡ್ದವಳು. ಅನಾರೋಗ್ಯದಿಂದ ಬಳಲುತ್ತಿದ್ದ ಮಗಲ ಮೇಲೆ ತಂದೆಗೆ ಅನುಮಾನ. ಇದೇ ಕಾರಣಕ್ಕೆ ಗಲಾಟೆ ಮಾಡಿದ್ದ ತಂದೆ ಸೆಪ್ಟೆಂಬರ್ ನಲ್ಲಿ ಮಗಳನ್ನು ಮನೆಯಿಂದ ಹೊರಗೆಳೆದುತಂದು ಕೈ-ಕಾಲಿಗೆ ಹಗ್ಗಕಟ್ಟಿ ಕಾಲುಗೆ ತಳ್ಳಿದ್ದಾನೆ. ಎರಡು ತಿಂಗಳ ಬಳಿಕ ಪ್ರತ್ಯಕ್ಷವಾಗಿರುವ ಬಾಲಕಿ ತನ್ನ ಕಷ್ಟವನ್ನು ಹೇಳಿಕೊಂಡಿದ್ದಾಳೆ. ಅಲ್ಲದೇ ಇದೇ ಪ್ರಕರಣದಲ್ಲಿ ಜೈಲು ಸೇರಿರುವ ತನ್ನ ತಂದೆಯನ್ನು ಬಿಡುಗಡೆ ಮಾಡಿ. ತನ್ನ ತಂಗಿಯರನ್ನು ನೋಡಿಕೊಳ್ಳಲು ಯಾರೂ ಇಲ್ಲ ಎಂದು ಮನವಿ ಮಾಡಿದ್ದಾಳೆ.
ಅಂದು ತಂದೆ ಕುಡಿದು ಬಂದು ಗಲಾಟೆ ಮಾಡು ತನ್ನ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಕೈ-ಕಾಲು ಕಟ್ಟಿ ತುಂಬಿ ಹರಿಯುತ್ತಿದ್ದ ಕಾಲುವೆಗೆ ಎಸೆದಿದ್ದಾನೆ. ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡಿದ್ದಾನೆ. ಕಾಲುವೆಗೆ ಬೀಳುತ್ತಿದ್ದಂತೆ ನನ್ನ ಕೈಗೆ ಕಟ್ಟಿದ್ದ ಹಗ್ಗ ಸಡಿಲಗೊಂಡಿತ್ತು. ನೀರಿನ ರಭಸಕ್ಕೆ ತೇಲಿಕೊಂಡು ಹೋಗಿ ಒಂದು ಕಬ್ಬಿಣದ ಸರಳಿಗೆ ಬಡಿದಿದ್ದೆ. ಅದೇ ನನ್ನ ಜೀವರಕ್ಷಣೆಗೆ ಕಾರಣವಾಗಿತ್ತು. ಅದನ್ನು ಹಿಡಿದು ಕಾಲುವೆಯಿಂದ ಮೇಲೆದ್ದಿದ್ದೆ. ಮೂವರು ದಾರಿ ಹೋಕರು ತನ್ನನ್ನು ಗುರುತಿಸಿ ಆಶ್ರಯ ನೀಡಿದ್ದರು. ಎರಡು ತಿಂಗಳ ಕಾಲ ಅವರ ಬಳಿಯೇ ಆಶ್ರಯ ಪಡೆದಿದ್ದೆ. ತನ್ನನ್ನು ಕಾಲುವೆಗೆ ನೂಕಿದ ತಂದೆ ಜಒಲು ಸೇರಿದ್ದು, ಆತನನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾಳೆ. ತನ್ನ ತಂಗಿಯರನ್ನು ನೋಡಿಕೊಳ್ಳಲು ಯಾರೂ ಇಲ್ಲ ಹಾಗಾಗಿ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾಳೆ.
