ಮಂಗಳೂರು : ಮಾದಕ ವಸ್ತುಗಳನ್ನ ಜೈಲಿನ ಒಳಗೆ ತರಲು ಬಿಡದಿದ್ದಕ್ಕೆ ಜೈಲಿನ ಸಿಬ್ಬಂದಿ ಮೇಲೆ ರೌಡಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಿಲ್ಲಾ ಕಾರಾಗೃಹ, ಕಾರವಾರದಲ್ಲಿ ನಡೆದಿದೆ.
ಮಹಮ್ಮದ್ ಅಬ್ದುಲ್ ಫಯಾನ್, ಕೌಶಿಕ್ ನಿಹಾಲ್ ಎಂಬಾತ ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಜೈಲರ್ ಕಲ್ಲಪ್ಪ ಸೇರಿ ಮೂವರ ಮೇಲೆ ಹಲ್ಲೆ ನಡೆದಿದೆ. ಮಾದಕ ವಸ್ತುಗಳನ್ನ ಜೈಲಿನ ಒಳಗಡೆ ಬಿಡದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
