ಕೆಲವರು ಇತರರಿಗೆ ಸವಾಲು ಹಾಕುವುದನ್ನು ಇಷ್ಟಪಡುತ್ತಾರೆ. ಸವಾಲನ್ನು ಸ್ವೀಕರಿಸಲು ಕೆಲವರು ಸಿದ್ಧರಾಗಿಯೂ ಇರುತ್ತಾರೆ. ಆದರೆ ಸವಾಲು ಸ್ವೀಕರಿಸುವಾಗ ಎಂತೆಂಥ ಪ್ರಶ್ನೆಗಳು ಬರುತ್ತವೆ ಎನ್ನುವುದನ್ನು ಹೇಳುವುದು ಕಷ್ಟ. ಆದರೆ ಎಂಥದ್ದೇ ಪ್ರಶ್ನೆ ಎದುರಾದರೂ ಅದನ್ನು ಜಯಿಸಲು ಹಲವರು ಸಿದ್ಧರಾಗಿರುತ್ತಾರೆ.
ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಆದರೆ ಇದು ತಮಾಷೆಯ ಸವಾಲನ್ನು ನೀಡಿರುವ ವಿಡಿಯೋವಾಗಿದೆ. ಒಬ್ಬ ವ್ಯಕ್ತಿ ಯುವತಿಯೊಬ್ಬಳಿಗೆ ಸವಾಲು ಎಸೆದಿರುವ ತಮಾಷೆಯ ವಿಡಿಯೋ ಇದಾಗಿದೆ.
ಯುವಕ, ಯುವತಿಗೆ 100 ಡಾಲರ್ ಹಣವನ್ನು ನೀಡುತ್ತಾನೆ ಮತ್ತು FAT ಅನ್ನು ಉಚ್ಚರಿಸಲು ಕೇಳುತ್ತಾನೆ. ಅದಕ್ಕೆ ಸರಿಯಾಗಿ ಉತ್ತರಿಸುತ್ತಾಳೆ. ನಂತರ, ಅವನು HER ಅನ್ನು ಉಚ್ಚರಿಸಲು ಕೇಳುತ್ತಾನೆ. ಯುವತಿ ಸರಿಯಾಗಿ ಹೇಳುತ್ತಾಳೆ.
ಮುಂದೆ ಇರುವುದೇ ಟ್ರಿಕ್ಕಿ FAT ಮತ್ತು HER ಎರಡನ್ನೂ ಸೇರಿಸುವಂತೆ ಹೇಳುತ್ತಾರೆ. ಆಗ ಅವಳು ಫ್ಯಾಟ್ ಹರ್ ಎನ್ನುತ್ತಾಳೆ. ಆದರೆ ಈ ಉತ್ತರ ತಪ್ಪು ಎನ್ನುವ ಯುವಕ ಅದು ಫಾದರ್ ಎಂದು ತಮಾಷೆ ಮಾಡಿ ದುಡ್ಡು ನಿನಗೆ ಸಿಗುವುದಿಲ್ಲ ಎಂದು ವಾಪಸ್ ತೆಗೆದುಕೊಂಡು ಹೋಗುತ್ತಾನೆ.
https://twitter.com/Fun_Entertement/status/1615690347962589185?ref_src=twsrc%5Etfw%7Ctwcamp%5Etweetembed%7Ctwterm%5E1615690347962589185%7Ctwgr%5Eed707bcf24a12a26d83bfa67a4ff6b544fd262b2%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-girl-loses-very-simple-language-test-and-100-how-would-you-fare-watch-and-tell-5863961%2F