ʼಯೇ ಜವಾನಿ ಹೈ ದೀವಾನಿʼ ಚಿತ್ರಕ್ಕೆ 10 ವರ್ಷದ ಸಂಭ್ರಮ; ಫಾರೂಕ್ ಶೇಖ್-ರಣಬೀರ್ ನಡುವಿನ ಭಾವನಾತ್ಮಕ ದೃಶ್ಯ ವೈರಲ್

ಬಾಲಿವುಡ್ ತಾರೆಯರಾದ ರಣಬೀರ್ ಕಪೂರ್, ದೀಪಿಕಾ ಪಡುಕೋಣೆ, ಆದಿತ್ಯ ರಾಯ್ ಕಪೂರ್ ಮತ್ತು ಕಲ್ಕಿ ಕೋಚ್ಲಿನ್ ಅಭಿನಯದ ಅಯಾನ್ ಮುಖರ್ಜಿಯವರ ʼಯೇ ಜವಾನಿ ಹೈ ದಿವಾನಿʼ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ 10 ವರ್ಷಗಳು ಕಳೆದಿವೆ. ಒಂದು ದಶಕದ ನಂತರವೂ, ಈ ಚಲನಚಿತ್ರವು ಹಲವರ ಫೇವರಿಟ್ ಆಗಿದೆ.

ಚಲನಚಿತ್ರದ 10ನೇ ವಾರ್ಷಿಕೋತ್ಸವದಂದು, ಜನರು ಅತ್ಯುತ್ತಮವೆಂದು ಭಾವಿಸಿದ ದೃಶ್ಯಗಳನ್ನು ನೆನಪಿಸಿಕೊಳ್ಳಲು ಟ್ವಿಟರ್‌ ಬಳಸಿಕೊಂಡಿದ್ದಾರೆ. ಕೆಲವರು ಬಾಲಂ ಪಿಚ್ಕರಿ ದೃಶ್ಯವನ್ನು ಇಷ್ಟಪಟ್ಟಿದ್ದರೆ, ಇನ್ನು ಕೆಲವರು ಅದಿತಿ (ಕಲ್ಕಿ) ಬನ್ನಿ (ರಣಬೀರ್) ಅವರಿಗೆ ತಾನು ಮದುವೆಯಾಗುವುದಾಗಿ ತಿಳಿಸಲು ವಿಡಿಯೋ ಸಂದೇಶವನ್ನು ಕಳುಹಿಸುವ ದೃಶ್ಯವನ್ನು ಇಷ್ಟಪಟ್ಟಿರುವುದಾಗಿ ಹೇಳಿದ್ದಾರೆ. ನಾವು ಬಹಳ ಬೇಗ ಬೆಳೆದುಬಿಟ್ವಿ ಅನ್ನೋ ಡೈಲಾಗ್ ಅಂತೂ ಚಿಂದಿ ಚಿತ್ರಾನ್ನ ಅಂತಾ ಹಲವರು ಹೇಳಿದ್ದಾರೆ.

ಆದರೆ, ಇವೆಲ್ಲವುಗಳ ನಡುವೆ ಈ ಒಂದು ಟ್ವೀಟ್ ಮಾತ್ರ ಬಹಳ ವೇಗವಾಗಿ ವೈರಲ್ ಆಗುತ್ತಿದೆ. ಚಿತ್ರದಲ್ಲಿ ಫಾರೂಕ್ ಶೇಖ್, ರಣಬೀರ್ ಕಪೂರ್ ತಂದೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದ ದೃಶ್ಯವೊಂದರಲ್ಲಿ ಇವರ ಅಭಿನಯ ಎಂಥವರನ್ನೂ ಕಣ್ಣೀರು ಹಾಕಿಸುವಂತಿದೆ. ಈ ದೃಶ್ಯದಲ್ಲಿ ಫಾರೂಕ್ ಶೇಖ್ ಬಹಳ ಅದ್ಭುತವಾಗಿ ಅಭಿನಯಿಸಿದ್ದಾರೆ ಎಂದು ಗುಣಗಾನ ಮಾಡಿದ್ದಾರೆ. ರಣಬೀರ್ ಕಪೂರ್ ಜೊತೆ ತಂದೆ-ಮಗ ಜೋಡಿಯಾಗಿ ಫಾರೂಕ್ ಶೇಖ್ ಅವರ ನಟನೆ ಬಹಳ ಅದ್ಭುತವಾಗಿತ್ತು ಎಂದು ತಿಳಿಸಿದ್ದಾರೆ.

https://twitter.com/apparitionnow/status/1663902486401531904?ref_src=twsrc%5Etfw%7Ctwcamp%5Etweetembed%7Ctwter

https://twitter.com/geddit_/status/1663964334442299392?ref_src=twsrc%5Etfw%7Ctwcamp%5Etweetembed%7Ctwterm%5E1663964334442299392%7Ctwgr%5Ead05bbc018f33c7ad5a0aaacb23f024d29eb9df1%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Ffarooq-sheikh-and-ranbir-kapoors-emotional-scene-from-yjhd-is-viral-brb-busy-crying-2387536-2023-06-01

https://twitter.com/AATISH_NAIR/status/1663906773437235210?ref_src=twsrc%5Etfw%7Ctwcamp%5Etweetembed%7Ctwterm%5E1663

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read