ರಾಜ್ಯದ ರೈತರೇ ಗಮನಿಸಿ : ಬೆಳೆ ವಿಮೆ ನೋಂದಣಿ ಅವಧಿ ಆ.30 ರವರೆಗೆ ವಿಸ್ತರಣೆ

2025-26 ನೇ ಸಾಲಿನ ಹವಾಮಾನಾಧಾರಿತ ಬೆಳೆಗಳಾದ ಅಡಿಕೆ, ಕಾಳುಮೆಣಸು, ಮಾವು, ಮತ್ತು ಶುಂಠಿ ಬೆಳೆಗಳಿಗೆ ನೀಡುವ ವಿಮೆಯ ನೋಂದಣಿಯ ಅವಧಿಯನ್ನು ಆಗಸ್ಟ್ 14 ರವರೆಗೆ ಮತ್ತು ಸಾಲ ಪಡೆದ ರೈತರುಗಳಿಗೆ ಆಗಸ್ಟ್ 30 ರವರೆಗೆ ವಿಸ್ತರಿಸಲಾಗಿದೆ.

ಸರ್ಕಾರದ ಆದೇಶದಂತೆ ಜುಲೈ 31 ಕ್ಕೆ ನಿಗದಿಯಾಗಿದ್ದ ನೋಂದಣಿ ಅವಧಿಯನ್ನು ವಿಸ್ತರಿಸಲಾಗಿದೆ. ಸಾಲವನ್ನು ಪಡೆಯದ ರೈತರುಗಳಿಗೆ ಬೆಳೆ ವಿಮೆ ಮಾಡಿಕೊಳ್ಳಲು ಆಗಸ್ಟ್ 14 ಕೊನೆಯ ದಿನವಾಗಿರುತ್ತದೆ. ಮತ್ತು ಸಾಲವನ್ನು ಪಡೆದ ರೈತರುಗಳಿಗೆ ಬೆಳೆ ವಿಮೆ ನೋಂದಣಿಯನ್ನು ಮಾಡಿಕೊಳ್ಳಲು ಆಗಸ್ಟ್ 30 ಕೊನೆಯ ದಿನವಾಗಿರುತ್ತದೆ. ಇದರ ಸೌಲಭ್ಯ ವನ್ನು ಪಡೆಯಲು ರೈತರುಗಳು ಪ್ರಸಕ್ತ ಸಾಲಿನ ಪಹಣಿ, ಬ್ಯಾಂಕ್ ಪಾಸ್ ಬುಕ್ ಪ್ರತಿ, ಆಧಾರ್ ಕಾರ್ಡ, ವಿವಿರಗಳೊಂದಿಗೆ ಬ್ಯಾಂಕ್ ಗಳಿಗೆ ಅಥವಾ ಸಮೀಪದ ಸಾರ್ವಜನಿಕ ಸೇವಾ ಕೇಂದ್ರ, ಗ್ರಾಮ ಒನ್ ಕೇಂದ್ರಗಳಲ್ಲಿ ನೋಂದಣಿಯನ್ನು ಮಾಡಿಕೊಳ್ಳಬಹುದು. ಜಿಲ್ಲೆಯ ಎಲ್ಲಾ ರೈತರು ನಿಗದಿತ ಅಂತಿಮ ದಿನಾಂಕದೊಳಗೆ ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊAಡು ಯೋಜನೆಯ ಸದುಪಯೋಗÀವನ್ನು ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕು ತೋಟಗಾರಿಕೆ ಇಲಾಖೆ ಕಛೇರಿಗಳನ್ನು ಅಥವಾ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಶಿವಮೊಗ್ಗ ದೂ.ಸಂ.08182-279415, ಮೊ.ಸಂ.9900046087, ಭದ್ರಾವತಿ ದೂ.ಸಂ.08282-295029, ಮೊ.ಸಂ.9108252536, ಶಿಕಾರಿಪುರ ದೂ.ಸಂ.08187-223544,ಮೊ.ಸA.8310662972, ಸೊರಬ ದೂ.ಸಂ.08184-295112, ಮೊ.ಸಂ.9900046117, ಸಾಗರ ದೂ.ಸಂ.08183-295124, ಮೊ.ಸಂ.9449177200, ತೀರ್ಥಹಳ್ಳಿ ದೂ.ಸಂ.08181-228151 ಮೊ.ಸಂ.9108280642, ಹೊಸನಗರ ದೂ.ಸಂ.08185-295364, ಮೊ.ಸಂ.9591695327 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಪಂಚಾಯತ್ ಮತ್ತು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಶಿವಮೊಗ್ಗ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read