ಬೆಳಗಾವಿ: ಖಾಸಗಿ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳಕ್ಕೆ ನೊಂದು ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದಲ್ಲಿ ನಡೆದಿದೆ.
ಸಾತೇರಿ ಹೊನ್ನಪ್ಪ ರುಟಕುಟೆ (78) ಮೃತ ರೈತ. ಮಣ್ಣೂರ ಗ್ರಾಮದ ಕೋ ಆಪರೇಟಿವ್ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತು ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ.
ರೈತ ಸಾತೇರಿ ಹೊನ್ನಪ್ಪ ಫೈನಾನ್ಸ್ ಕಂಪನಿಯಿಂದ 12 ಲಕ್ಷ ರೂಪಾಯಿ ಸಾಲ ತೆಗೆದುಕೊಂಡಿದ್ದರು. ಅದರಲ್ಲಿ 4 ಲಕ್ಷ ರೂ. ಮರುಪಾವತಿ ಮಾಡಿದ್ದರು. ಹೀಗಿದ್ದರೂ ಬಡ್ಡಿ ಮತ್ತು ಅಸಲು ಸೇರಿ ಮತ್ತೆ 16 ಲಕ್ಷ ಪಾವತಿಸುವಂತೆ ಫೈನಾನ್ಸ್ ನವರು ಕಿರುಕುಳ ನೀಡುತ್ತಿದ್ದರು.
ಸಾಲ ತೀರಿಸದೆ ಇದ್ದರೆ ಮನೆ ಹರಾಜು ಹಾಕುವುದಾಗಿ ಬೆದರಿಕೆ ಹಾಕಿದ್ದರು. ಅಲ್ಲದೇ ಊರಿನಲ್ಲಿ ಡಂಗುರ ಸಾರಿದ್ದರಂತೆ. ಇದರಿಂದಾಗಿ ಮರ್ಯಾದೆ ಹೋಯಿತೆಂದು ನೊಂದ ರೌತ ಆತ್ಮಹತ್ಯೆಗೆ ಶರಣಾಗಿದ್ದಾರೆ.
