ಬೆರಗಾಗಿಸುವಂತಿದೆ ಈ ರೈತ ಬೆಳೆದಿರುವ ‘ಮೂಲಂಗಿ’ ತೂಕ….!

ಮಹಾರಾಷ್ಟ್ರದ ರೈತರೊಬ್ಬರು ತಮ್ಮ  ಹೊಲದಲ್ಲಿ ದಾಖಲೆ ತೂಕದ ಮೂಲಂಗಿ ಬೆಳೆದಿದ್ದು, ಇದು ಈಗ ಆ ಪ್ರಾಂತ್ಯದ ಸಾರ್ವಜನಿಕರನ್ನು ಅಚ್ಚರಿಗೀಡು ಮಾಡಿದೆ. ಈ ರೈತ ಬೆಳೆದಿರುವ ಒಂದೊಂದು ಮೂಲಂಗಿಯೂ ಬರೋಬ್ಬರಿ 5 ಕೆಜಿ ತೂಗುತ್ತಿವೆ.

ಬೀಡ್ ಜಿಲ್ಲೆಯ ಕೂಲೆವಾಡಿ ಗ್ರಾಮದ ನಿವಾಸಿ ಜ್ಞಾನದೇವ ಶೇಷರಾವ್ ನೆಟ್ಗೆ ಈ ದಾಖಲೆ ತೂಕದ ಮೂಲಂಗಿ ಬೆಳೆದವರಾಗಿದ್ದು, ಇವರು ಬೆಳೆದ ಕೇವಲ ಒಂದು ಮೂಲಂಗಿ ಮಾತ್ರ 5 ಕೆ.ಜಿ. ತೂಕವಿಲ್ಲ. 15 ಕ್ಕಿಂತಲೂ ಅಧಿಕ ಮೂಲಂಗಿಗಳು ತಲಾ 5 ಕೆಜಿ ತೂಗುತ್ತಿವೆ.

ಸಾಮಾನ್ಯವಾಗಿ ಬೆಳೆಯುವ ಮೂಲಂಗಿಗಳು ಕಾಲು ಕೆಜಿಯಿಂದ ಗರಿಷ್ಠ ಎಂದರೆ 1 ಕೆ.ಜಿ.ಯವರೆಗೆ ತೂಗಬಹುದು. ಆದರೆ ಜ್ಞಾನದೇವ್ ಬೆಳೆದಿರುವ ಮೂಲಂಗಿ ತಲಾ 5 ಕೆಜಿ ತೂಗುತ್ತಿವೆ. ಆಧುನಿಕ ಕೃಷಿ ತಂತ್ರಜ್ಞಾನ ಬಳಸಿಕೊಂಡು ಅವರು ಈ ಸಾಧನೆ ಮಾಡಿದ್ದಾರೆ ಎನ್ನಲಾಗಿದೆ.

Farmer Grows Giant Radishes With Each Weighing Over Five Kg in Maharashtra’s Beed District (News18)

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read