Shimoga: ಇಲ್ಲಿದೆ ರೈತ ಸಂಪರ್ಕ ಕೇಂದ್ರಗಳ ಸಹಾಯವಾಣಿ ಸಂಖ್ಯೆ

ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಸರ್ಕಾರದಿಂದ ಘೋಷಣೆಯಾಗಿದ್ದು, ಈ ಕುರಿತು ಕರ್ನಾಟಕ ಸರ್ಕಾರವು 2ನೇ ಹಂತದ ಬರ ಪರಿಹಾರವನ್ನು ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಜಿಲ್ಲೆಯ ಒಟ್ಟು 59605 ಫಲಾನುಭವಿಗಳಿಗೆ ರೂ. 38,74,31,015 ಗಳನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ.

ಪರಿಹಾರ ವಿತರಣೆ ಕುರಿತು ಕುಂದು ಕೊರತೆ ಹಾಗೂ ವಿಚಾರಣೆಗೆ ಜಿಲ್ಲೆಯ ತಾಲೂಕುಗಳಲ್ಲಿ ಸಹಾಯವಾಣಿಯನ್ನು ಸ್ಥಾಪನೆ ಕೆಳಕಂಡಂತೆ ಮಾಡಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ತಹಶೀಲ್ದಾರ್ ಶಿವಮೊಗ್ಗ -08182-279311, ಭದ್ರಾವತಿ-08282-263466, ತೀರ್ಥಹಳ್ಳಿ – 08181-228239, ಸಾಗರ- 08183-226074, ಶಿಕಾರಿಪುರ-08187-222239, ಸೊರಬ-08184-272241, ಹೊಸನಗರ-08185-221235 ಗಳನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read