ಚಿತ್ರೀಕರಣದ ವೇಳೆ ತಡವಾಗಿ ಬಂದಿದ್ದಕ್ಕೆ ಕಡಿತವಾಗಿತ್ತು ನಟಿ ಸಂಬಳ; ʼಕುರ್ಬಾನಿʼ ಸಿನಿಮಾದ ಘಟನೆ ಸ್ಮರಿಸಿಕೊಂಡ ಜೀನತ್‌ ಅಮಾನ್…!

ದಿವಂಗತ ನಟ – ಬಾಲಿವುಡ್ ನಿರ್ಮಾಪಕ ಫಿರೋಜ್ ಖಾನ್ ಅವರ ಬಗ್ಗೆ ಹಿರಿಯ ನಟಿ ಜೀನತ್ ಅಮಾನ್ ಅವರು ಹಂಚಿಕೊಂಡ ಅಭಿಪ್ರಾಯದ ಪೋಸ್ಟ್ ಅನ್ನು ಫಿರೋಜ್ ಖಾನ್ ಪುತ್ರರಾಗಿರುವ ಫರ್ದೀನ್ ಖಾನ್ ಹಂಚಿಕೊಂಡಿದ್ದು ಗಮನ ಸೆಳೆದಿದೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಜೀನತ್ ಅಮಾನ್, ಫಿರೋಜ್ ಖಾನ್ ಅವರ ವರ್ಚಸ್ಸನ್ನು ಕೊಂಡಾಡಿದ್ದು, ಅವರಂತಹ ಅದ್ಭುತ ವ್ಯಕ್ತಿತ್ವ ಹೊಂದಿದವರನ್ನು ಇದುವರೆಗೆ ನೋಡಿಲ್ಲ ಎಂದಿದ್ದಾರೆ.

ಕುರ್ಬಾನಿ ಚಿತ್ರೀಕರಣ ಸಮಯದಲ್ಲಿ ನಡೆದ ಘಟನೆಯೊಂದನ್ನು ಸ್ಮರಿಸಿಕೊಂಡು ಫಿರೋಜ್ ಖಾನ್ ರ ಕಟ್ಟುನಿಟ್ಟಿನ ವ್ಯಕ್ತಿತ್ವವನ್ನು ಸ್ಮರಿಸಿ ಹೊಗಳಿದ್ದಾರೆ.

ಅವರು ತಮ್ಮ ಪೋಸ್ಟ್ ನಲ್ಲಿ ” ನಾನು ಒಂದು ರಾತ್ರಿ ಪಾರ್ಟಿಗೆ ಹೋಗಿದ್ದರಿಂದ ಕುರ್ಬಾನಿ ಸೆಟ್‌ಗೆ ತಡವಾಗಿ ತಲುಪಿದೆ. ಫಿರೋಜ್ ಖಾನ್ ನನ್ನ ಮೇಲೆ ಕೋಪಗೊಳ್ಳದಿದ್ದರೂ, ನಾನು ತಡವಾಗಿ ಹೋಗಿದ್ದಕ್ಕೆ ನನ್ನ ಹಣವನ್ನು ಕಡಿತಗೊಳಿಸಿದರು. ಫಿರೋಜ್ ತನ್ನ ಕ್ಯಾಮೆರಾದ ಹಿಂದೆ ಕೆಲಸದಲ್ಲಿದ್ದರು. ನಾನು ಅವರಿಗೆ ಕ್ಷಮೆಯನ್ನು ಕೇಳುವ ಮೊದಲು, ಅವರು ‘ಬೇಗಂ ನೀವು ತಡವಾಗಿ ಬಂದಿದ್ದೀರಿ ಮತ್ತು ವಿಳಂಬಕ್ಕೆ ನೀವು ಪಾವತಿಸಲಿದ್ದೀರಿ.’ ಎಂದರು.

“ನಾನು ತಡವಾಗಿ ಬಂದಿದ್ದಕ್ಕೆ ಯಾವುದೇ ವಾದ ಮಾಡದೇ ಗದರದೇ ನನಗೆ ನೀಡಬೇಕಾದ ಹಣವನ್ನು ಕಡಿತಗೊಳಿಸಿದರು. ಆ ಒಂದು ಗಂಟೆ ವಿಳಂಬಕ್ಕಾಗಿ ಆ ಸಮಯದಲ್ಲಿ ಹೆಚ್ಚುವರಿ ಕೆಲಸ ಮಾಡಿದ ಸಿಬ್ಬಂದಿಗೆ ಪಾವತಿಸಲು ಅವರು ನನ್ನ ವೇತನವನ್ನು ಕಡಿತಗೊಳಿಸಿದರು” ಎಂದು ಹೇಳಿದ್ದಾರೆ.

ಈ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಫಿರೋಜ್ ಖಾನ್ ಪುತ್ರರಾಗಿರುವ ಫರ್ದೀನ್ ಖಾನ್ ತಮ್ಮ ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ನಟಿ ಜೀನತ್ ಅಮಾನ್ ರನ್ನು ಟ್ಯಾಗ್ ಮಾಡಿ “ ಜೀನತ್ ಅಮಾನ್ ಆಂಟಿ, ಇದು ಯಾವುದೇ ಸಾಂತ್ವನವಾಗಿದ್ದರೆ ಕುಟುಂಬವನ್ನು ಸಹ ಉಳಿಸಲಾಗಿಲ್ಲ. ನಾವು ಕೇವಲ 25%ನ ಪ್ರಮಾಣಿತ ಕುಟುಂಬ(standard family) ರಿಯಾಯಿತಿಯನ್ನು ಸ್ವೀಕರಿಸಿದ್ದೇವೆ. ಖಾನ್ ಸಾಬ್ ನಿಮ್ಮ ಪೋಸ್ಟ್ ಅನ್ನು ಇಷ್ಟಪಡುತ್ತಿದ್ದರು ಮತ್ತು ಅವರು ಜೋರಾಗಿ ನಗುತ್ತಿದ್ದರು” ಎಂದು ಭಾವನಾತ್ಮಕತೆಯ ಜೊತೆಗೆ ಫಿರೋಜ್ ಖಾನ್ ಕುಟುಂಬ ಈಗಲೂ ಭಿನ್ನವಾಗಿಲ್ಲ ಎಂದು ಹೇಳಿದ್ದಾರೆ.

ಕುರ್ಬಾನಿ 1980 ರ ರೊಮ್ಯಾಂಟಿಕ್ ಆಕ್ಷನ್ ಚಿತ್ರವಾಗಿದ್ದು ಫಿರೋಜ್ ಖಾನ್ ಮತ್ತು ಜೀನತ್ ಅಮಾನ್ ಜೊತೆಗೆ ವಿನೋದ್ ಖನ್ನಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read