ಸೆಲ್ಫಿಗಾಗಿ ಬ್ರೆಟ್ ಲೀ ಕಾರನ್ನು ಹಿಂಬಾಲಿಸಿಕೊಂಡು ಹೋದ ಅಭಿಮಾನಿಗಳು

ಭಾರತದಲ್ಲಿ ಕ್ರಿಕೆಟ್ ಎಂದರೆ ಯಾವ ಮಟ್ಟದ ಕ್ರೇಜ಼್‌ ಇದೆ ಹಾಗೂ ಕ್ರಿಕೆಟರುಗಳ ಮೇಲೆ ಯಾವ ಮಟ್ಟದ ಪ್ರೀತಿ ಇದೆ ಎಂದು ತಿಳಿಸಿ ಹೇಳಬೇಕೇ?

ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಭಾರತದಲ್ಲಿಯೂ ಸಹ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಹಿಂದಿಯನ್ನೂ ಕಲಿತಿರುವ ಲೀ ನಮ್ಮಲ್ಲೂ ಬಹಳ ಜನಪ್ರಿಯವಾಗಿರುವ ಆಸೀಸ್ ಕ್ರಿಕೆಟರುಗಳ ಪೈಕಿ ಮುಂಚೂಣಿಯಲ್ಲಿದ್ದಾರೆ.

ಇತ್ತೀಚೆಗೆ ತಾವು ಚಲಿಸುತ್ತಿದ್ದ ಕಾರಿನ ಪಕ್ಕದಲ್ಲಿ ಚಲಿಸುತ್ತಿದ್ದ ಸ್ಕೂಟರ್‌ ಒಂದರಲ್ಲಿ ಸವಾರಿ ಮಾಡುತ್ತಿದ್ದ ಸವಾರರು ತಮ್ಮನ್ನು ಕಂಡೊಡನೆಯೇ ಭಾರೀ ಪುಳಕಗೊಂಡು, ಸೆಲ್ಫೀಗಾಗಿ ತಮ್ಮನ್ನು ಹಿಂಬಾಲಿಸಿಕೊಂಡು ಬರುತ್ತಿರುವ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ ಬ್ರೆಟ್ ಲೀ.

“ಭಾರತ ಸದಾ ಅದ್ಭುತ ಅಚ್ಚರಿಗಳನ್ನು ಒಳಗೊಂಡಿದೆ! ನಿಮ್ಮ ಪ್ರೀತಿ ಇಷ್ಟವಾಯಿತು. ಹೆಲ್ಮೆಟ್ ಧರಿಸಿ ಯುವಕರೇ,” ಎಂದು ಹೆಲ್ಮೆಟ್ ಧರಿಸದೇ ಸ್ಕೂಟರ್‌ನಲ್ಲಿ ಬರುತ್ತಿದ್ದ ಯುವಕರಿಗೆ ಕಾಳಜಿಯ ಸಂದೇಶವೊಂದನ್ನು ನೀಡಿದ್ದಾರೆ ಬ್ರೆಟ್ ಲೀ.

https://twitter.com/BrettLee_58/status/1646224065932439552?ref_src=twsrc%5Etfw%7Ctwcamp%5Et

https://twitter.com/Pandeypiyush133/status/1646373102715277312?ref_src=twsrc%5Etfw%7Ctwcamp%5Etweetembed%7Ctwterm%5E1646373102715277312%7Ctwgr%5E44d414fedf89a0d576325cc8e6783b64ac89180f%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Ffans-chase-brett-lees-car-for-a-selfie-cricketer-shares-video-of-chance-encounter-on-twitter-2359451-2023-04-13

https://twitter.com/TakarPagla/status/1646325201548857344?ref_src=twsrc%5Etfw%7Ctwcamp%5Etweetembed%7Ctwterm%5E16463

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read