ಗೆಳೆಯನ ಚಿತ್ರಕ್ಕೆ ಕಿಚ್ಚನ ಸಾಥ್: ‘ಭಿಕ್ಷುಕ – 2’ ಟ್ರೇಲರ್ ರಿಲೀಸ್ ಮಾಡಿದ ನಟ ಸುದೀಪ್

ಖ್ಯಾತ ನಟ ‘ವಿಜಯ್ ಆಂಟೋನಿ’ ನಟನೆಯ ‘ಪಿಚ್ಚೈಕಾರನ್’ 2 ಸಿನಿಮಾ ಕಾಲಿವುಡ್ ಅಂಗಳದಲ್ಲಿ ಸಖತ್ ಸದ್ದು ಮಾಡಿದ ಚಿತ್ರ. ಇದೀಗ ‘ಪಿಚ್ಚೈಕಾರನ್’-2 ಸಿನಿಮಾ ರಿಲೀಸ್ ಗೆ ಸಜ್ಜಾಗುತ್ತಿದೆ. ಸದ್ಯ, ಕನ್ನಡದ ಸಿನಿಪ್ರೇಮಿಗಳಿಗೆ ಗುಡ್ ನ್ಯೂಸ್ ಏನಪ್ಪ ಅಂದರೆ ಈ ಸಿನಿಮಾ ಕನ್ನಡದಲ್ಲಿ ಕೂಡ ರಿಲೀಸ್ ಮಾಡಲು ಚಿತ್ರತಂಡ ನಿರ್ಧಾರ ಮಾಡಿದೆ.

ಯೆಸ್, ಭಿಕ್ಷುಕ-2 ಎನ್ನುವ ಟೈಟಲ್ ಇಟ್ಟುಕೊಂಡು ಕನ್ನಡದಲ್ಲಿ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದ್ದು, ಗೆಳೆಯ ವಿಜಯ್ ಆಂಟೋನಿ ಚಿತ್ರಕ್ಕೆ ಗೆಳೆಯ ನಟ ಕಿಚ್ಚ ಸುದೀಪ್ ಸಾಥ್ ನೀಡಿದ್ದಾರೆ. ಕನ್ನಡದಲ್ಲಿ ಭಿಕ್ಷುಕ-2 ಎನ್ನುವ ಸಿನಿಮಾ ದೊಡ್ಡ ಪರದೆಯಲ್ಲಿ ಮಿಂಚಲು ಸಜ್ಜಾಗಿದ್ದು, ನಟ ಸುದೀಪ್ ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.

ವಿಜಯ್ ಆಂಟೋನಿಗೆ ಕಿಚ್ಚ ಸುದೀಪ್ ಗೆಳೆಯ ಕೂಡ ಆಗಿರೋದ್ರಿಂದ ಟ್ರೈಲರ್ ರಿಲೀಸ್ ಮಾಡಿ ಒಳ್ಳೆಯದಾಗಲಿ ಗೆಳೆಯ ಎಂದು ಶುಭ ಕೋರಿದ್ದಾರೆ. ಮೇ 19 ರಂದು ಕನ್ನಡ ಸೇರಿ ಐದು ಭಾಷೆಯಲ್ಲಿ ‘ಭಿಕ್ಷುಕ-2’ ಬಿಡುಗಡೆಯಾಗುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read