ಮುಂಬೈ: 30 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್ ಅವರನ್ನು ರಾಜಸ್ಥಾನ ಮತ್ತು ಮುಂಬೈ ಪೊಲೀಸರು ಜಂಟಿ ಕಾರ್ಯಚರಣೆ ನಡೆಸಿ ಭಾನುವಾರ ಮುಂಬೈನಲ್ಲಿ ಬಂಧಿಸಿದ್ದಾರೆ.
ರಾಜಸ್ಥಾನದ ಉದಯಪುರದ ಇಂದಿರಾ ಐವಿಎಫ್ ಆಸ್ಪತ್ರೆಯ ಮಾಲೀಕ ಡಾ. ಅಜಯ್ ಮುರ್ದಿಯಾ ಅವರು ತಮ್ಮ ಮೃತ ಪತ್ನಿಯ ಜೀವನ ಆಧಾರಿತ ಸಿನಿಮಾ ಮಾಡಲು ಅಪೇಕ್ಷಿಸಿದ್ದರು. ತಾವು ಸಿನಿಮಾ ಮಾಡುವುದಾಗಿ ಒಪ್ಪಿಕೊಂಡಿದ್ದ ವಿಕ್ರಂ ಭಟ್ ಈ ಚಿತ್ರ 200 ಕೋಟಿ ರೂ. ಆದಾಯ ಗಳಿಸುತ್ತದೆ ಎಂದು ನಂಬಿಸಿ 30 ಕೋಟಿ ರೂಪಾಯಿ ಪಡೆದುಕೊಂಡಿದ್ದರು. ನಂತರ ಚಿತ್ರ ನಿರ್ಮಾಣ ಮಾಡದೆ ವಂಚಿಸಿದ್ದರು. ಈ ಬಗ್ಗೆ ಉದಯಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಪೊಲೀಸರು ಮುಂಬೈನಲ್ಲಿ ವಿಕ್ರಂ ಭಟ್ ಅವರನ್ನು ಬಂಧಿಸಿದ್ದಾರೆ.
