ಈ ಫಿಟ್ನೆಸ್‌ ಬ್ಯಾಂಡ್‌ ಗೆ ಫಿದಾ ಆಗಿದ್ದಾರೆ ಫೇಮಸ್‌ ಕ್ರೀಡಾಪಟುಗಳು; ನಿಮಗೆ ತಿಳಿದಿರಲಿ ಇದರ ವಿಶೇಷತೆ

ವಿಶಿಷ್ಟವಾದ ಫಿಟ್ನೆಸ್‌ ಬ್ಯಾಂಡ್‌ ಒಂದು ಸೆಲೆಬ್ರಿಟಿಗಳನ್ನು ಆಕರ್ಷಿಸುತ್ತಿದೆ. ರೊನಾಲ್ಡೋ, ವಿರಾಟ್‌ ಕೊಹ್ಲಿ ಹೀಗೆ ವಿಶ್ವದ ಜನಪ್ರಿಯ ಕ್ರೀಡಾಪಟುಗಳು WHOOP ಫಿಟ್ನೆಸ್‌ ಬ್ಯಾಂಡ್‌ ಧರಿಸುತ್ತಿದ್ದಾರೆ. ಇದೊಂದು ಹೆಲ್ತ್‌ ಮತ್ತು ಫಿಟ್‌ನೆಸ್ ಟ್ರ್ಯಾಕರ್, ಬಳಕೆದಾರರ ಭೌತಿಕ ಡೇಟಾವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತದೆ. ಅಥ್ಲೆಟಿಕ್ ಕಾರ್ಯಕ್ಷಮತೆ, ನಿದ್ರೆಯ ಗುಣಮಟ್ಟ, ಒತ್ತಡ ಮತ್ತು ಒಟ್ಟಾರೆ ಆರೋಗ್ಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಈ ಡೇಟಾ ಸಹಾಯ ಮಾಡುತ್ತದೆ.

ಹೃದಯ ಬಡಿತದ ವ್ಯತ್ಯಾಸ, ಒತ್ತಡ ಮತ್ತು ಚೇತರಿಕೆಯ ಅಳತೆ ಸೇರಿದಂತೆ ಎಲ್ಲಾ ವಿವರಗಳು ಈ ಬ್ಯಾಂಡ್‌ನಲ್ಲಿ ಲಭ್ಯವಾಗುತ್ತವೆ. ಇದು ಉಸಿರಾಟದ ದರವನ್ನು ಸಹ ಮೇಲ್ವಿಚಾರಣೆ ಮಾಡುತ್ತದೆ. ಒತ್ತಡ ಮತ್ತು ಆಯಾಸದ ಮಟ್ಟವನ್ನು ಸೂಚಿಸುತ್ತದೆ. ನಮ್ಮ ನಿದ್ರೆಯ ಅವಧಿ, ಗುಣಮಟ್ಟ ಮತ್ತು ಹಂತಗಳನ್ನು ಕೂಡ ಬ್ಯಾಂಡ್‌ ಮೂಲಕ ಟ್ರ್ಯಾಕ್ ಮಾಡಬಹುದು. ಅಷ್ಟೇ ಅಲ್ಲ ಗೊರಕೆಯ ತೀವ್ರತೆ ಮತ್ತು ಅವಧಿಯನ್ನು ಅಳೆಯುತ್ತದೆ. ರಕ್ತದಲ್ಲಿನ ಆಮ್ಲಜನಕದ ಮಟ್ಟವನ್ನು ಮೇಲ್ವಿಚಾರಣೆ ಮಾಡುತ್ತದೆ.

ಚರ್ಮದ ಆರೋಗ್ಯವನ್ನು ಸಹ ಬ್ಯಾಂಡ್‌ ಸಹಾಯದಿಂದ ಅಳೆಯಬಹುದು. ಚರ್ಮದ ತಾಪಮಾನದಲ್ಲಿನ ಬದಲಾವಣೆಗಳನ್ನು ಇದು ಟ್ರ್ಯಾಕ್ ಮಾಡುತ್ತದೆ, ದೇಹದ ತಾಪಮಾನ ನಿಯಂತ್ರಣ ಮತ್ತು ಜಲಸಂಚಯನವನ್ನು ಸೂಚಿಸುತ್ತದೆ. ಇದಲ್ಲದೆ ಯಾವಾಗ ವ್ಯಾಯಾಮ ಮಾಡಬೇಕು, ಯಾವಾಗ ವಿಶ್ರಾಂತಿ ಪಡೆಯಬೇಕು ಮತ್ತು ಯಾವಾಗ ಕ್ರಾಸ್ ಟ್ರೈನ್ ಮಾಡಬೇಕು ಎಂಬುದನ್ನೆಲ್ಲ WHOOP ಮೂಲಕ ತಿಳಿದುಕೊಳ್ಳಬಹುದು. ನಿದ್ರೆಯ ಗುಣಮಟ್ಟ ಸುಧಾರಣೆ, ಒತ್ತಡ ನಿರ್ವಹಣೆಗೆ ಇದು ಸಹಾಯಕವಾಗಿದೆ.

WHOOP ಅನ್ನು ವೃತ್ತಿಪರರು, ಒಲಿಂಪಿಯನ್‌ಗಳು ಮತ್ತು ಹವ್ಯಾಸಿಗಳು ಸೇರಿದಂತೆ ಪ್ರಪಂಚದಾದ್ಯಂತದ ಅನೇಕ ಕ್ರೀಡಾಪಟುಗಳು ಬಳಸುತ್ತಾರೆ. ವಿರಾಟ್ ಕೊಹ್ಲಿ, ಎಂಎಸ್ ಧೋನಿ, ರೋಹಿತ್ ಶರ್ಮಾ, ಕ್ರಿಸ್ಟಿಯಾನೋ ರೊನಾಲ್ಡೊ, ಲಿಯೋನೆಲ್ ಮೆಸ್ಸಿ, ನೇಮರ್‌, ಬ್ಯಾಡ್ಮಿಂಟನ್‌ ತಾರೆಯರಾದ ನೊವಾಕ್ ಜೊಕೊವಿಕ್, ಸೆರೆನಾ ವಿಲಿಯಮ್ಸ್ ಸೇರಿದಂತೆ ಬಹುತೇಕ ಎಲ್ಲ ಕ್ರೀಡಾಪಟುಗಳು WHOOP ಬಳಸ್ತಿದ್ದಾರೆ. WHOOP ಭಾರತದಲ್ಲಿಯೂ ಹೆಚ್ಚು ಜನಪ್ರಿಯವಾಗುತ್ತಿದೆ. WHOOP ಬ್ಯಾಂಡ್ ಅನ್ನು ಚಾರ್ಜ್ ಮಾಡಲು ನಿಯಮಿತವಾಗಿ ಚಾರ್ಜಿಂಗ್ ಸ್ಟೇಷನ್‌ ತೆರಳಬೇಕಾಗುತ್ತದೆ. ಏಕೆಂದರೆ ಇದು ಸಬ್‌ಸ್ಕ್ರಿಪ್ಷನ್‌ ಆಧರಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read