ನೀವು ಇದುವರೆಗೂ ಬಹಳಷ್ಟು ಮದುವೆಗಳನ್ನು ನೋಡಿದ್ದೀರಿ. ಅವುಗಳಲ್ಲಿ ಒಂದಷ್ಟು ಮದುವೆಗಳು ತಮ್ಮ ವಿಶಿಷ್ಟತೆಯಿಂದ ನಿಮ್ಮ ನೆನಪಲ್ಲಿ ಸದಾ ಉಳಿಯುವಂಥವಾಗಿವೆ. ಆದರೆ ಈ ರೀತಿಯ ಮದುವೆಯನ್ನು ನೀವು ಎಂದೂ ನೋಡಿರಲಾರಿರಿ.
ತಂತಮ್ಮ ನಾಯಿಗಳಿಗೆ ಮದುವೆ ಮಾಡುತ್ತಿರುವ ಸಿರಿವಂತ ಕುಟುಂಬಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹೌದು ನೀವು ಓದಿದ್ದು ಸರಿಯಾಗೇ ಇದೆ.
ನಾಯಿಗಳ ಈ ಮದುವೆ ವಿಜೃಂಭಣೆಯಿಂದ ನಡೆದಿದ್ದು, ದೊಡ್ಡ ಪ್ರಮಾಣದಲ್ಲಿ ಅತಿಥಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಮದುವೆಯ ಭೋಜನಾಕೂಟಕ್ಕೆ ಥರಾವರಿ ಭಕ್ಷ್ಯಗಳನ್ನು ಉಣಬಡಿಸಲಾಗಿದ್ದು, ಮದುಮಗನನ್ನು ಎಲೆಕ್ಟ್ರಿಕ್ ಆಟಿಕೆ ಕಾರಿನಲ್ಲಿ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಗಿದೆ. ಮದುಮಗಳಾಗಿ ಸಿಂಗಾರಗೊಂಡಿದ್ದ ಹೆಣ್ಣು ನಾಯಿಯನ್ನು ತನ್ನ ಮಾವನ ಮನೆಗೆ ಕಳುಹಿಸಲಾಗಿದೆ.
ಮದುವೆ ಸಮಾರಂಭದ ಅಷ್ಟೂ ಕ್ಷಣಗಳ ನೆನಪುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದೆ.
https://twitter.com/Hatindersinghr3/status/1633475344568315905?ref_src=twsrc%5Etfw%7Ctwcamp%5Etweetembed%7Ctwterm%5E
https://twitter.com/ShubhamShukla43/status/1633693328507293697?ref_src=twsrc%5Etfw%7Ctwcamp%5Etweetembed%7Ctwterm%5E1633693328507293697%7Ctwgr%5E2bf7fe38205713daefdb7cc40276151d0c5cd39c%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Ffamily-gets-their-dogs-married-in-a-grand-wedding-ceremony-viral-video-divides-internet-2344266-2023-03-09
https://twitter.com/gud_sup_/status/1633696992944881664?ref_src=twsrc%5Etfw%7Ctwcamp%5Etweetembed%7Ctwterm%5E1633