ಗಮನಿಸಿ: ನಿಮ್ಮಲ್ಲೂ ಇರಬಹುದು ಖೋಟಾ ನೋಟು: ನಕಲಿ ನೋಟು ಜಾಲ ಭೇದಿಸಿದ ಪೊಲೀಸರು: 6 ಮಂದಿ ಆರೆಸ್ಟ್

ದಾವಣಗೆರೆ: ನಕಲಿ ನೋಟುಗಳನ್ನು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಜಾಲವನ್ನು ದಾವಣಗೆರೆ ಜಿಲ್ಲಾ ಪೊಲೀಸರು ಭೇದಿಸಿದ್ದು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ 500 ಮತ್ತು 200 ರೂಪಾಯಿ ಮುಖಬೆಲೆಯ ಒಟ್ಟು 7.70 ಲಕ್ಷ ರೂ. ನಕಲಿ ನೋಟು, 43 ಸಾವಿರ ರೂಪಾಯಿ ಮೌಲ್ಯದ ಅಸಲಿ ನೋಟು ವಶಕ್ಕೆ ಪಡೆಯಲಾಗಿದೆ. ದಾವಣಗೆರೆ ಜಿಲ್ಲೆಯ ಹರೀಶ್, ಕುಬೇರಪ್ಪ, ಮೈಸೂರು ಜಿಲ್ಲೆಯ ಸಂದೀಪ್, ಮನೋಜ್ ಗೌಡ, ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಜೆ. ರುದ್ರೇಶ್, ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯ ಕೃಷ್ಣನಾಯ್ಕ್ ಬಂಧಿತರು ಎಂದು ಎಸ್.ಪಿ. ಉಮಾ ಪ್ರಶಾಂತ್ ತಿಳಿಸಿದ್ದಾರೆ.

ಜನವರಿ 17ರಂದು ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಬಳಿ ನಕಲಿ ನೋಟು ಚಲಾವಣೆ ಆಗುತ್ತಿರುವ ಮಾಹಿತಿ ಮೇರೆಗೆ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿ ಹರೀಶ್ ಮತ್ತು ಕುಬೇರಪ್ಪನನ್ನು ಬಂಧಿಸಿ 37 ಸಾವಿರ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹರಿಹರ ಗ್ರಾಮಾಂತರ ಠಾಣೆ ಪಿಐಗಳಾದ ಸುರೇಶ್ ನಗರಿ ಹಾಗೂ ಅರವಿಂದ್ ಅವರು ಹೆಚ್ಚಿನ ತನಿಖೆ ಕೈಗೊಂಡು ಉಳಿದ ಆರೋಪಿಗಳನ್ನು ಬಂಧಿಸಿದ್ದಾರೆ.

ಜನನಿಬಿಡ ಪ್ರದೇಶಗಳು, ಜಾತ್ರೆ, ಸಂತೆ, ಅಂಗಡಿಗಳನ್ನೇ ಟಾರ್ಗೆಟ್ ಮಾಡಿ ರಾತ್ರಿ ವೇಳೆ ಹೆಚ್ಚು ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿದ್ದರು. 20 ಲಕ್ಷ ರೂ. ನಕಲಿ ನೋಟುಗಳನ್ನು ತಯಾರಿಸಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದು, 7 ಲಕ್ಷ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ. ಉಳಿದ 13 ಲಕ್ಷ ನೋಟುಗಳು ಚಲಾವಣೆಯಾಗಿರಬಹುದು ಎಂದು ಶಂಕಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read