ಬೆಂಗಳೂರು: ಮಗ ಕಾಣೆಯಾಗಿದ್ದಾನೆ ಎಂದು ಸುಳ್ಳು ಕೇಸ್ ದಾಖಲಿಸಿದ್ದ ತಾಯಿಗೆ ಹೈಕೋರ್ಟ್ 2 ಲಕ್ಷ ರೂಪಾಯಿ ದಂಡ ವಿಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಇಂದಿರಾನಗರದ ನಿವಾಸಿ ತಾಯಿ ಮಹೇಶ್ವರಿ ಅವರಿಗೆ ಸುಳ್ಳು ಕೇಸ್ ಹಾಕಿದ್ದಕ್ಕೆ ಹೈಕೋರ್ಟ್ ದಂಡ ವಿಧಿಸಿದೆ. ಪೊಲೀಸರ ಮೇಲಿನ ಕೋಪಕ್ಕೆ ಮಹೇಶ್ವರಿ ತನ್ನ ಮಗ ಕೃಪಲಾನಿ ಕಾನೆಯಾಗಿದ್ದಾನೆ ಎಂದು ಕೇಸ್ ದಾಖಲಿಸಿದ್ದರು.
ಪಕ್ಕದಮನೆಯವರು ರಾತ್ರಿ ಗಲಾಟೆ ಮಾಡುತ್ತಾರೆಂದು ಮಹೇಶ್ವರಿ ಮಗ ಕೃಪಲಾನಿ ಈ ಹಿಂದೆ ದೂರು ನೀಡಿದ್ದರು. ಪಕ್ಕದ ಮನೆಯವರು ಗಾಂಜಾ ಮಾರುತ್ತಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಬಗ್ಗೆ ಎನ್ ಸಿಆರ್ ದಾಖಲಿಸಿಕೊಂಡಿದ್ದ ಇಂದಿರಾನಗರ ಪೊಲೀಸರು ತನಿಖೆ ನಡೆಸಿದಾಗ ಸುಳ್ಲು ಕೇಸ್ ಎಂಬುದು ಗೊತ್ತಾಗಿದೆ. ಇದಾದ ಬಳಿಕ ಇಂದಿರಾನಗರ ಇನ್ಸ್ ಪೆಕ್ಟರ್ ವಿರುದ್ಧ ಕೃಪಲಾನಿ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಇನ್ಸ್ ಪೆಕ್ಟರ್ ಮೇಲಿನ ಸಿಟ್ಟಿಗೆ ತಾಯಿ ಮಹೇಶ್ವರಿಯಿಂದ ಹೇಬಿಯಸ್ ಕಾರ್ಪಸ್ ಹಾಕಿಸಿದ್ದರು.
ಮಗ ಕಾಣೆಯಾಗಿದ್ದಾನೆ ಎಂದು ತಾಯಿ ಮಹೇಶ್ವರಿ ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಪೊಲೀಸ್ ಠಾಣೆಗೆ ಹೋದವನು ವಾಪಾಸ್ ಬಂದಿಲ್ಲ ಎಂದು ದೂರು ನೀಡಿದ್ದರು. ತಾಯಿ ಕೈಯಿಂದ ದೂರು ಕೊಡಿಸಿದ್ದ ಕೃಪಲಾನಿ ಚೆನ್ನೈನ ಮ್ಯಾರಿಯೆಟ್ ಹೋಟೆಲ್ ನಲ್ಲಿ ತಂಗಿದ್ದ. ಸಿಡಿಆರ್ ತೆಗೆಸಿದ ಪೊಲೀಸರಿಗೆ ತಾಯಿ ಜೊತೆ ಮಗ ಕೃಪಲಾನಿ ಸಂಪರ್ಕದಲ್ಲಿರುವುದು ಗೊತ್ತಾಗಿದೆ. ಕೃಪಲಾನಿ ಕರೆತಂದು ವಿಚಾರಿಸಿದಾಗ ಇನ್ಸ್ ಪೆಕ್ಟರ್ ಮೇಲಿನ ಕೋಪಕ್ಕೆ ಹೀಗೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾರೆ. ಈ ಬಗ್ಗೆ ಹೈಕೋರ್ಟ್ ಗೆ ಪೊಲೀಸರು ದಾಖಲೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುಳ್ಳ್ಖು ದೂರು ಸಲ್ಲಿಸಿದ ಮಹೇಶ್ವರಿಗೆ 2 ಲಕ್ಷ ದಂಡ ವಿಧಿಸಿರುವ ಹೈಕೋರ್ಟ್ 2 ಲಕ್ಷದ ಪೈಕಿ 1 ಲಕ್ಷ ಕಾನೂನು ಸೇವಾ ಪ್ರಾಧಿಕಾರಕ್ಕೆ ನೀಡಲು ಸೂಚಿಸಿದೆ. ಒಂದು ವಾರದಲ್ಲಿ ದಂಡ ಪಾವತಿಸದಿದ್ದಲ್ಲಿ ಹೈಕೋರ್ಟ್ ಆದೇಶ ಉಲ್ಲಂಘನೆ ಕೇಸ್ ದಾಖಲಿಸುವುದಾಗಿ ಎಚ್ಚರಿಸಿದೆ.