ಪದವಿ ಪ್ರದಾನ ಸಮಾರಂಭದಲ್ಲಿ ಬ್ಯಾಕ್‌ಫ್ಲಿಪ್ ವಿಫಲ: ಸಹಪಾಠಿಗೆ ಒದೆ ಕೊಟ್ಟ ವಿಡಿಯೋ ವೈರಲ್ | Watch

ಪದವಿ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿಯೊಬ್ಬ ಸಂತೋಷದಿಂದ ಬ್ಯಾಕ್‌ಫ್ಲಿಪ್ (ಹಿಂದಕ್ಕೆ ನೆಗೆತ) ಮಾಡಲು ಹೋಗಿ, ಆಕಸ್ಮಿಕವಾಗಿ ಸಹಪಾಠಿ ವಿದ್ಯಾರ್ಥಿನಿಗೆ ಒದ್ದ ಘಟನೆ ನಡೆದಿದೆ. ಈ ಅನಿರೀಕ್ಷಿತ ತಿರುವು ಸಮಾರಂಭಕ್ಕೆ ಬಂದ ಎಲ್ಲರನ್ನು ಅಚ್ಚರಿಗೊಳಿಸಿದೆ.

ವಾರಾಂತ್ಯದಲ್ಲಿ ಫ್ಲೋರಿಡಾದ ಸೌತ್ ಪ್ಲಾಂಟೇಶನ್ ಹೈಸ್ಕೂಲ್‌ನಲ್ಲಿ ಈ ಘಟನೆ ನಡೆದಿದೆ. ತನ್ನ ಡಿಪ್ಲೊಮಾ ಸ್ವೀಕರಿಸಿದ ನಂತರ, ಸಂಭ್ರಮದ ಭರದಲ್ಲಿ ವಿದ್ಯಾರ್ಥಿಯೊಬ್ಬ ವೇದಿಕೆಯ ಮೇಲೆ ಬ್ಯಾಕ್‌ಫ್ಲಿಪ್ ಮಾಡಲು ಪ್ರಯತ್ನಿಸಿದ್ದಾನೆ. ಆದರೆ, ಅಚಾತುರ್ಯದಿಂದ ಆತನ ಹಿಂದೆ ನಿಂತಿದ್ದ ವಿದ್ಯಾರ್ಥಿನಿಗೆ ಕಾಲು ತಾಗಿದೆ.

ಈ ಘಟನೆಯ ವಿಡಿಯೋವನ್ನು ಟಿಕ್‌ಟಾಕ್ ಬಳಕೆದಾರರಾದ @rebel_chaos ಹಂಚಿಕೊಂಡಿದ್ದು, ಇದು ತಕ್ಷಣವೇ ವೈರಲ್ ಆಗಿದೆ. “ಅವನು ಕ್ಷಮೆಯಾಚಿಸಿದ್ದಾನೆ, ಆದರೆ ತನ್ನ ಹೆಸರು ಕರೆಯುವ ಮೊದಲು ತಾನು ಬ್ಯಾಕ್‌ಫ್ಲಿಪ್ ಮಾಡುತ್ತೇನೆ ಎಂದು ಅವಳಿಗೆ ಎಚ್ಚರಿಕೆ ನೀಡಿದ್ದ” ಎಂದು ವಿಡಿಯೋ ಹಂಚಿಕೊಂಡಿರುವವರು ಬರೆದುಕೊಂಡಿದ್ದಾರೆ. ಈ ಘಟನೆಯ ನಂತರ, ಇಬ್ಬರೂ ಹತ್ತಿರದಲ್ಲೇ ಕುಳಿತುಕೊಳ್ಳಬೇಕಾಯಿತು ಏಕೆಂದರೆ ಎಲ್ಲವೂ ತುಂಬಾ ವೇಗವಾಗಿ ನಡೆದುಹೋಯಿತು ಎಂದೂ ತಿಳಿಸಿದ್ದಾರೆ.

ಆದೃಷ್ಟವಶಾತ್, ಈ ಅನಿರೀಕ್ಷಿತ ಘಟನೆಯಿಂದ ಯಾವುದೇ ಗಂಭೀರ ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ಈ ವಿಡಿಯೋ ಈಗ ಇಂಟರ್ನೆಟ್‌ನಲ್ಲಿ ತೀವ್ರ ಸಂಚಲನ ಮೂಡಿಸಿದೆ.


Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read