ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ದಿಗ್ವಿಜಯ ಸಾಧಿಸಿದ ನಂತರ ಶನಿವಾರ ರಾಜ್ಯಾದ್ಯಂತ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದರು. ಆದರೆ ಕರಾವಳಿ ಭಾಗದ ಭಟ್ಕಳ ನಡೆದ ಸಂಭ್ರಮಾಚರಣೆ ವೇಳೆ ಕಂಡ ಧ್ವಜದ ಹಾರಾಟ ವಿವಾದ ಹುಟ್ಟುಹಾಕಿತ್ತು.
ಕಾಂಗ್ರೆಸ್ ಜಯಗಳಿಸಿದ ನಂತರ, ಸಂಭ್ರಮಾಚರಣೆಯಲ್ಲಿ ಇಸ್ಲಾಮಿಕ್ ಧ್ವಜವನ್ನು ಬೀಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ. ಹಲವಾರು ಪ್ರಭಾವಿ ವ್ಯಕ್ತಿಗಳು, ಗಮನಾರ್ಹವಾಗಿ ಬಲಪಂಥೀಯರು ಈ ವಿಡಿಯೋನ ಹಂಚಿಕೊಂಡು ಕಾಂಗ್ರೆಸ್ ಗೆದ್ದ ನಂತರ ರಾಜ್ಯದಲ್ಲಿ ಏನಾಗ್ತಿದೆ ನೋಡಿ ಎಂದು ವಿಡಿಯೋದೊಂದಿಗೆ ಟೀಕಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು “ಭಟ್ಕಳ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿನ ನಂತರ……..” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ.
ಮತ್ತೊಬ್ಬ ಟ್ವಿಟರ್ ಬಳಕೆದಾರರು “ಇಂದು ಕಾಂಗ್ರೆಸ್ ಗೆದ್ದ ನಂತರ ಕರ್ನಾಟಕದ ಭಟ್ಕಳದಲ್ಲಿ ಒಬ್ಬ ವ್ಯಕ್ತಿ ಧ್ವಜವನ್ನು ಬೀಸುತ್ತಿರುವುದನ್ನು ನೋಡಬಹುದಾಗಿದೆ. ಭಟ್ಕಳವು ಮುಸ್ಲಿಂ ಪ್ರಾಬಲ್ಯದ ಪ್ರದೇಶವಾಗಿದೆ ಮತ್ತು ಇಸ್ಲಾಮಿಕ್ ಭಯೋತ್ಪಾದಕ ಯಾಸಿನ್ ಭಟ್ಕಳ್ ಭಟ್ಕಳದಿಂದ ಬಂದವರು” ಎಂದು ಟ್ವೀಟ್ ಮಾಡಿದ್ದಾರೆ.
ಆದರೆ ವಿಡಿಯೋದ ಅಸಲಿ ವಿಷಯವನ್ನ ಫ್ಯಾಕ್ಟ್ ಚೆಕ್ ಮಾಡುವ ಆಲ್ಟ್ ನ್ಯೂಸ್ ಬಯಲು ಮಾಡಿದೆ. ಸಂಭ್ರಮಾಚರಣೆ ವೇಳೆ ಹಿಡಿದಿರುವುದು ಪಾಕಿಸ್ತಾನದ ಧ್ವಜವಲ್ಲ ಬದಲಾಗಿ ಇಸ್ಲಾಂ ಧರ್ಮದ ಧ್ವಜ. ಅಲ್ಲದೇ ಹಿಂದೂ ಧಾರ್ಮಿಕ ಚಿಹ್ನೆ ಓಂ ಅಕ್ಷರ ಹೊಂದಿರುವ ಕೇಸರಿ ಧ್ವಜ, ಕಾಂಗ್ರೆಸ್ ಧ್ವಜ ಮತ್ತು ಬಿಆರ್ ಅಂಬೇಡ್ಕರ್ ಅವರ ಭಾವಚಿತ್ರವಿರುವ ನೀಲಿ ಧ್ವಜ ಕೂಡಾ ವೈರಲ್ ವೀಡಿಯೊದಲ್ಲಿ ಕಾಣಬಹುದು.
ಆಲ್ಟ್ ನ್ಯೂಸ್ ಭಟ್ಕಳದ ಸ್ಥಳೀಯ ನಿವಾಸಿ ಸಲಾವುದ್ದೀನ್ ಎಂಬುವರನ್ನು ಸಂಪರ್ಕಿಸಿದ್ದಾರೆ. ಅದರಲ್ಲಿ ಸ್ಥಳೀಯರು ಆಚರಣೆ ನಡೆದ ಸ್ಥಳದಲ್ಲಿ ಚಿತ್ರೀಕರಿಸಿದ ವೀಡಿಯೊವನ್ನು ಒದಗಿಸಿದ್ದಾರೆ. “ಇದು ಭಟ್ಕಳ ಸರ್ಕಲ್. ಆರಂಭದಲ್ಲಿ ಇಲ್ಲಿ ಧ್ವಜಗಳಿರಲಿಲ್ಲ. ಹಸಿರು ಧ್ವಜ, ಕೇಸರಿ ಧ್ವಜ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಧ್ವಜ ಅಥವಾ ಕಾಂಗ್ರೆಸ್ ಧ್ವಜವಿರಲಿ ಎಲ್ಲಾ ಧ್ವಜಗಳನ್ನು ಒಂದೇ ಸಮಯದಲ್ಲಿ ಹಾಕಲಾಯಿತು. ಟ್ವಿಟರ್‌ನಲ್ಲಿ ತಪ್ಪುದಾರಿಗೆಳೆಯುವ ಮಾಹಿತಿಗೆ ಬಲಿ ಬೀಳಬೇಡಿ, ಎಲ್ಲಾ ನಾಲ್ಕು ಧ್ವಜಗಳನ್ನು ಒಂದೇ ಸಮಯದಲ್ಲಿ ಹಾಕಲಾಗಿದೆ” ಎಂದು ಸ್ಥಳೀಯರು ಹೇಳಿದ್ದಾರೆ.
https://twitter.com/amitmalviya/status/1657383258122846209?ref_src=twsrc%5Etfw%7Ctwcamp%5Etweetembed%7Ctwterm%5E1657383258122846209%7Ctwgr%5E19e87c73046c1e1931024ea794007b640815dd9f%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fscroll-epaper-dh3f4dc3b626844ff3882b1c7021c98f2f%2Ffactcheckwasanislamicflagraisedinkarnatakasbhatkalwithcommunalmotives-newsid-n499567640
https://twitter.com/erbmjha/status/1657365683595022341?ref_src=twsrc%5Etfw%7Ctwcamp%5Etweetembed%7Ctwterm%5E1657365683595022341%7Ctwgr%5E19e87c73046c1e1931024ea794007b640815dd9f%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fscroll-epaper-dh3f4dc3b626844ff3882b1c7021c98f2f%2Ffactcheckwasanislamicflagraisedinkarnatakasbhatkalwithcommunalmotives-newsid-n499567640
https://twitter.com/rightwing_guy/status/1657359416629538818?ref_src=twsrc%5Etfw%7Ctwcamp%5Etweetembed%7Ctwterm%5E1657359416629538818%7Ctwgr%5E19e87c73046c1e1931024ea794007b640815dd9f%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fscroll-epaper-dh3f4dc3b626844ff3882b1c7021c98f2f%2Ffactcheckwasanislamicflagraisedinkarnatakasbhatkalwithcommunalmotives-newsid-n499567640