ಸದಾ ವಿವಾದಗಳಿಂದಲೇ ಸುದ್ದಿಯಾಗುವ ಸ್ವಯಂ ಘೋಷಿತ ದೇವಮಾನವ, ಆಧ್ಯಾತ್ಮಗುರು ನಿತ್ಯಾನಂದ ಸ್ವಾಮಿ ನಿಧನರಾಗಿದ್ದಾರೆ ಎಂಬ ಸುದ್ದಿ ಭಾರಿ ವೈರಲ್ ಆಗಿದೆ. ಭಾರತದಿಂದ ಪಲಾಯನಗೈದು ತನ್ನದೇ ಆದ ಯುನೈಟೆಡ್ ಸ್ಟೇಟ್ ಆಫ್ ಕೈಲಾಸ ಎಂಬ ಹೊಸ ರಾಷ್ಟ್ರ ಸ್ಥಾಪನೆ ಮಾಡುವುದಾಗಿ ಘೋಷಿಸಿ, ಭೂ ವಿವಾದಗಳಿಂದಲೂ ಸುದ್ದಿಯಾಗಿರುವ ನಿತ್ಯಾನಂದ ಸ್ವಾಮಿ ಏಕಾಏಕಿ ನಿಧನರಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.
ಈ ಸುದ್ದಿ ಓದಿದ ಜನರು ಅಚ್ಚರಿಗೊಳಪಟ್ಟಿದ್ದಾರೆ. ಯಾವುದೇ ಖಾಯಿಲೆ, ಅನಾರೋಗ್ಯವಿಲ್ಲದೇ ನಿತ್ಯಾನಂದ ಹೇಗೆ ನಿಧನರಾದರೂ ಎಂದು ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಿನ್ನೆ ಏಪ್ರಿಲ್ 1 ಆದ್ದರಿಂದ ಸುದ್ದಿ ಪೂಲ್ ಮಾಡಲು ಹರಿಬಿಡಲಾಗಿದೆ ಎಂದು ಹೇಳಲಾಗುತ್ತಿದೆ. ನಿತ್ಯಾನಂದ ನಿಧನರಾಗಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಸುಳ್ಳು ಸುದ್ದಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗುತ್ತಿದೆ.
ಕೆಲ ದಿನಗಳ ಹಿಂದೆ ಸ್ವಯಂ ಘೋಷಿತ ಆಧ್ಯಾತ್ಮ ಗುರು ನಿತ್ಯಾನಂದ ಅನಾರೋಗ್ಯದಿಂದ ಬಳಲುತ್ತಿದ್ದು, ಕೋಮಾ ಸ್ಥಿತಿಯಲ್ಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಅದಾದ ಕೆಲವೇ ದಿನಗಳಲ್ಲಿ ನಿತ್ಯಾನಂದ ವಿಡಿಯೋ ಮೂಲಕ ಉಪನ್ಯಾಸಗಳನ್ನು ನೀಡುತ್ತಾ, ವದಂತಿಗಳಿಗೆ ತೆರೆ ಎಳೆದಿದ್ದರು. ಈಗ ಅವರು ನಿಧನರಾಗಿದ್ದಾರೆ ಎಂಬ ಸುದ್ದಿ ಹರಡಿದೆ.
ನಿತ್ಯಾನಂದ ಯಾರು?
ಜನವರಿ 1, 1978 ರಂದು ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ಅರುಣಾಚಲಂ ಮತ್ತು ಲೋಕನಾಯಕಿ ದಂಪತಿಗೆ ಜನಿಸಿದ ಸ್ವಾಮಿ ನಿತ್ಯಾನಂದ ಆಧ್ಯಾತ್ಮಿಕ ನಾಯಕರಾಗಿ ಪ್ರಾಮುಖ್ಯತೆ ಪಡೆದರು. ದೈವಿಕ ಸಾಮರ್ಥ್ಯಗಳನ್ನು ಹೊಂದಿರುವುದಾಗಿ ಹೇಳಿಕೊಂಡು, ಅವರು ಗಮನಾರ್ಹ ಅನುಯಾಯಿಗಳನ್ನು ಸಂಪಾದಿಸಿದರು ಮತ್ತು ಭಾರತ ಮತ್ತು ವಿದೇಶಗಳಲ್ಲಿ ಅನೇಕ ಆಶ್ರಮಗಳನ್ನು ಸ್ಥಾಪಿಸಿದರು. ಭಕ್ತರಿಗೆ ಜ್ಞಾನೋದಯದ ಕಡೆಗೆ ಮಾರ್ಗದರ್ಶನ ನೀಡುವ ಗುರುವಾಗಿ ತಮ್ಮನ್ನು ತಾವು ಪ್ರಸ್ತುತಪಡಿಸಿಕೊಂಡ ಅವರು ವರ್ಷಗಳಲ್ಲಿ ಮೆಚ್ಚುಗೆ ಮತ್ತು ವಿವಾದ ಎರಡನ್ನೂ ಗಳಿಸಿದರು.
நான் வீழ்வேன் என நினைத்தாயோ? pic.twitter.com/tejsYpsfQI
— KAILASA’s SPH NITHYANANDA (@SriNithyananda) April 1, 2025