ಫೇಸ್ ಬುಕ್ ನಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಬ್ಯಾಕ್ ನ್ಯಾವಿಗೇಷನ್

ಫೇಸ್ ಬುಕ್ ನಲ್ಲಿ ಬ್ಯಾಕ್ ನ್ಯಾವಿಗೇಷನ್ ತೆಗೆದುಹಾಕಲಾಗಿದೆ. ಬ್ಯಾಕ್ ಬಟನ್ ಕಾರ್ಯನಿರ್ವಹಿಸುತ್ತಿಲ್ಲ ಇದರಿಂದ ಫೇಸ್ ಬುಕ್ ಬಳಕೆದಾರರು ಸಾಕಷ್ಟು ಕನ್ ಫ್ಯೂಸ್ ಆಗಿದ್ದು ತಮಗಾಗುತ್ತಿರುವ ಸಮಸ್ಯೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸುತ್ತಿದ್ದಾರೆ.

ಫೇಸ್‌ಬುಕ್‌ನಲ್ಲಿ ಬ್ಯಾಕ್ ಬಟನ್ ಏಕಾಏಕಿ ಕಾರ್ಯನಿರ್ವಹಿಸುತ್ತಿಲ್ಲ. ಫೇಸ್‌ಬುಕ್ ಅಪ್ಲಿಕೇಶನ್‌ನಲ್ಲಿ ಹಿಂದಿನ ಪುಟ ಅಥವಾ ಪರದೆಗೆ ಹಿಂತಿರುಗಲು ಬ್ಯಾಕ್ ಬಟನ್ ಅನ್ನು ಬಳಸಲು ಬಳಕೆದಾರರು ಪ್ರಯತ್ನಿಸಿದಾಗ ಬ್ಯಾಕ್ ಹೋಗಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಮೊಬೈಲ್ ನಲ್ಲಿ ಫೇಸ್ ಬುಕ್ ಬಳಕೆ ಮಾಡುತ್ತಿದ್ದ ಹಲವರು ಫೋನ್ ಹ್ಯಾಂಗ್ ಆಗಿದಿಯೇ ಎಂದು ಸ್ವಿಚ್ಡ್ ಆಫ್ ಮಾಡಿ ಆನ್ ಮಾಡಿ ನೋಡಿದ್ದಾರೆ. ಆದಾಗ್ಯೂ ಬ್ಯಾಕ್ ನ್ಯಾವಿಗೇಷನ್ ಬಟನ್ ಕಾರ್ಯನಿರ್ವಹಿಸಿಲ್ಲ.

ಈ ಹಿಂದಿನಂತೆ ಫೇಸ್ ಬುಕ್ ನಲ್ಲಿ ಬ್ಯಾಕ್ ಬಟನ್ ನಿರೀಕ್ಷಿಸಿದಂತೆ ಕಾರ್ಯನಿರ್ವಹಿಸುತ್ತಿಲ್ಲ. ಬಳಕೆದಾರರು ಪ್ರಸ್ತುತ ಪುಟ ಅಥವಾ ಪರದೆಯ ಮೇಲೆ ಅಂಟಿಕೊಂಡೇ ಇರುವಂತಾಗಿದೆ. ಫೇಸ್‌ಬುಕ್ ಲಿಂಕ್ ಅನ್ನು ತೆರೆದ ನಂತರ ಹಿಂತಿರುಗಲು ಸಾಧ್ಯವಿಲ್ಲದೇ ಸಮಸ್ಯೆಯಾಗಿದೆ ಎಂದು ಇತರ ಸಾಮಾಜಿಕ ಜಾಲತಾಣಗಳ ಮೂಲಕ ಬಳಕೆದಾರರು ದೂರುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read