ಎರಡನೇ ಸುತ್ತಿನ ಉದ್ಯೋಗ ಕಡಿತ: 10,000 ಉದ್ಯೋಗಿಗಳ ವಜಾಗೊಳಿಸಲಿದೆ ಫೇಸ್‌ ಬುಕ್ ಪೋಷಕ ಮೆಟಾ

ಫೇಸ್‌ಬುಕ್ ಪೋಷಕ ಮೆಟಾ ಪ್ಲಾಟ್‌ ಫಾರ್ಮ್‌ ಗಳಲ್ಲಿ 10,000 ಉದ್ಯೋಗಿಗಳನ್ನು ಕಡಿತಗೊಳಿಸುವುದಾಗಿ ಮಂಗಳವಾರ ಹೇಳಿದೆ.

11,000 ಉದ್ಯೋಗಿಗಳನ್ನು ಕೈಬಿಟ್ಟು, ಕೆಲವೇ ತಿಂಗಳಲ್ಲಿ ಎರಡನೇ ಸುತ್ತಿನ ಸಾಮೂಹಿಕ ವಜಾಗಳನ್ನು ಘೋಷಿಸಿದ ಮೊದಲ ಬಿಗ್ ಟೆಕ್ ಕಂಪನಿ ಇದಾಗಿದೆ.

ನಮ್ಮ ತಂಡದ ಗಾತ್ರದಲ್ಲಿ ಸುಮಾರು 10,000 ಜನರ ಕಡಿಮೆ ಮಾಡಲು ಮತ್ತು ನಾವು ಇನ್ನೂ ನೇಮಕ ಮಾಡದ ಸುಮಾರು 5,000 ಹೆಚ್ಚುವರಿ ಸಿಬ್ಬಂದಿ ತೆಗೆದುಕೊಳ್ಳದಿರುವ ನಿರೀಕ್ಷೆಯಲ್ಲಿದ್ದೇವೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಜುಕರ್‌ ಬರ್ಗ್ ಸಿಬ್ಬಂದಿಗೆ ಕಳಿಸಿದ ಸಂದೇಶದಲ್ಲಿ ತಿಳಿಸಿದ್ದಾರೆ.

ಹದಗೆಡುತ್ತಿರುವ ಆರ್ಥಿಕತೆಯು ಅಮೆರಿಕದಾದ್ಯಂತ ಕಾರ್ಪೊರೇಟ್ ವಲಯದಲ್ಲಿ ಸಾಮೂಹಿಕ ಉದ್ಯೋಗ ಕಡಿತಕ್ಕೆ ಕಾರಣವಾಗಿದೆ. ವಾಲ್ ಸ್ಟ್ರೀಟ್ ಬ್ಯಾಂಕ್‌ ಗಳಾದ ಗೋಲ್ಡ್‌ ಮನ್ ಸ್ಯಾಚ್ಸ್ ಮತ್ತು ಮೋರ್ಗಾನ್ ಸ್ಟಾನ್ಲಿಯಿಂದ ಹಿಡಿದು Amazon.com ಮತ್ತು Microsoft ಸೇರಿದಂತೆ ಬಿಗ್ ಟೆಕ್ ಸಂಸ್ಥೆಗಳವರೆಗೆ ಉದ್ಯೋಗ ಕಡಿತ ಮಾಡಲಾಗಿದೆ.

2022 ರ ಆರಂಭದಿಂದ ಟೆಕ್ ಉದ್ಯಮವು 2,80,000 ಕ್ಕೂ ಹೆಚ್ಚು ಕಾರ್ಮಿಕರನ್ನು ವಜಾಗೊಳಿಸಿದೆ, ಅವರಲ್ಲಿ ಸುಮಾರು 40% ಈ ವರ್ಷ ಬರಲಿದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read