ರಾಜ್ಯದ ಯಾವುದೇ ಭಾಗದಲ್ಲಿ 2 ಎಕರೆವರೆಗಿನ ಭೂ ಪರಿವರ್ತನೆಗೆ ವಿನಾಯಿತಿ

ಬೆಂಗಳೂರು: ರಾಜ್ಯದ ಯಾವುದೇ ಭಾಗದಲ್ಲಿ ಎರಡು ಎಕರೆವರೆಗಿನ ಭೂಮಿಯಲ್ಲಿ ಕೈಗಾರಿಕೆ ಮಾಡಲು ಭೂ ಪರಿವರ್ತನೆಯಿಂದ ವಿನಾಯಿತಿ ನೀಡುವುದು, ಡಿಜಿಟಲ್ ಸಹಿಯೊಂದಿಗೆ ನಾನಾ ನೊಂದಣಿ ಪ್ರಕ್ರಿಯೆಗಳ ಸರಣಿಕರಣಕ್ಕೆ ಒತ್ತು ನೀಡುವ ಪ್ರಮುಖ ಉದ್ದೇಶದಿಂದ ವಿಧೇಯಕ ತರಲಾಗಿದೆ.

ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಕರ್ನಾಟಕ ಭೂ ಸುಧಾರಣೆಗಳು ಮತ್ತು ಕೆಲವು ಇತರ ಕಾನೂನುಗಳ ತಿದ್ದುಪಡಿ ವಿಧೇಯಕ -2025 ಹಾಗೂ ನೋಂದಣಿ ಕರ್ನಾಟಕ ತಿದ್ದುಪಡಿ ವಿಧೇಯಕ -2025 ಸದಸ್ಯರ ಪಕ್ಷಾತೀತ ಪ್ರಶಂಸೆಯೊಂದಿಗೆ ಸದನದ ಸರ್ವಾನುಮತದ ಅನುಮೋದನೆ ಪಡೆದುಕೊಂಡಿದೆ.

ಕಂದಾಯ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ, ಭ್ರಷ್ಟಾಚಾರ ಹಾಗೂ ವಿಳಂಬಕ್ಕೆ ಕಡಿವಾಣ ಹಾಕಲು ಸಾರ್ವಜನಿಕ ಹಾಗೂ ಕೈಗಾರಿಕಾ ಎರಡು ಪ್ರಮುಖ ಕಾನೂನು ತಿದ್ದುಪಡಿಗಳಿಗೆ ಬುಧವಾರ ವಿಧಾನಸಭೆ ಒಪ್ಪಿಗೆ ನೀಡಿದೆ.

ಎಂಎಸ್ಎಂಇ ಉದ್ಯಮಗಳ ಬಹುದಿನಗಳ ಬೇಡಿಕೆ ವಿಶೇಷವಾಗಿ ನವೀಕರಿಸಬಹುದಾದ ಇಂಧನ ವಲಯದ ಮನವಿ ಆಧರಿಸಿ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಪ್ರಕಟಿಸಿದ್ದಂತೆ ಎರಡು ಎಕರೆವರೆಗಿನ ಜಾಗದಲ್ಲಿ ಕೈಗಾರಿಕೆ ಮಾಡಲು ಭೂ ಪರಿವರ್ತನೆಯಿಂದ ವಿನಾಯಿತಿ ನೀಡಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ. ಕೃಷಿ ಸಂಬಂಧಿ ಉದ್ಯಮ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿದ್ದ ಈ ವಿನಾಯಿತಿಯನ್ನು ಎಲ್ಲಾ ಕೈಗಾರಿಕಾ ಪ್ರದೇಶಗಳಿಗೆ ವಿಸ್ತರಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read