ಎಚ್ಚರ: ಅತಿಯಾದ ಬಾಯಾರಿಕೆ ಅಪಾಯದ ಮುನ್ಸೂಚನೆ

ನೀರು ನಮ್ಮ ಆರೋಗ್ಯಕ್ಕೆ ಅತ್ಯಗತ್ಯ. ಪ್ರತಿಯೊಬ್ಬ ವ್ಯಕ್ತಿ ಆಹಾರವಿಲ್ಲದೆ ಒಂದೆರಡು ದಿನ ಬದುಕಬಹುದು. ಆದ್ರೆ ನೀರಿಲ್ಲದೆ ಒಂದು ದಿನ ಇರೋದು ಕಷ್ಟವಾಗುತ್ತದೆ. ದೇಹದಲ್ಲಿ ನೀರಿನಂಶ ಕಡಿಮೆ ಆದ್ರೆ ನಾನಾ ಸಮಸ್ಯೆ ಶುರುವಾಗುತ್ತದೆ. ಪ್ರತಿ ದಿನ ಮೂರು ಲೀಟರ್‌ ನೀರನ್ನು ವ್ಯಕ್ತಿ ಕುಡಿಯಬೇಕು ಎಂದು ವೈದ್ಯರು ಸಲಹೆ ನೀಡ್ತಾರೆ. ಇಷ್ಟು ನೀರು ಸೇವನೆ ಮಾಡಿದ ನಂತ್ರವೂ ನಿಮಗೆ ಬಾಯಾರಿಕೆ ಸಮಸ್ಯೆ ಕಾಣ್ತಿದ್ದರೆ ನೀವು ಎಚ್ಚರವಾಗಿರುವುದು ಒಳ್ಳೆಯದು. ಅತಿಯಾದ ಬಾಯಾರಿಕೆ ಅನೇಕ ಅನಾರೋಗ್ಯದ ಮುನ್ಸೂಚನೆಯಾಗಿದೆ.

ಆಗಾಗ ಆಗುವ ಬಾಯಾರಿಕೆಯನ್ನು ಪಾಲಿಡಿಪ್ಸಿಯಾ ಎಂದು ಕರೆಯಲಾಗುತ್ತದೆ. ದೈಹಿಕ ಶ್ರಮ, ಅತಿಯಾದ ಬೆವರು, ನಿರ್ಜಲೀಕರಣ, ಹೆಚ್ಚು ಉಪ್ಪು ಸೇವನೆ ಮಾಡಿದಾಗ ಬಾಯಾರಿಕೆ ಆಗುತ್ತದೆ. ಇದಲ್ಲದೆ ಕೆಫೀನ್‌ ಯುಕ್ತ ಆಹಾರ ಹಾಗೂ ಮದ್ಯಪಾನ ಸೇವನೆ ಕೂಡ ನಿಮ್ಮ ಬಾಯಾರಿಕೆ ಹೆಚ್ಚಿಸುತ್ತದೆ.

ಪಾಲಿಡಿಪ್ಸಿಯಾದಿಂದ ಕೆಲ ಗಂಭೀರ ಕಾಯಿಲೆ ಕಾಣಿಸಿಕೊಳ್ಳುತ್ತದೆ. ನಿಮಗೆ ಮಧುಮೇಹ ಕಾಡ್ತಿದ್ದರೆ, ಹೃದಯ ಸಂಬಂಧಿ ಸಮಸ್ಯೆ ಕಾಡ್ತಿದ್ದರೂ ಬಾಯಾರಿಕೆ ಆಗುತ್ತದೆ.

ಅತಿಯಾದ ಬಾಯಾರಿಕೆ  ಸೆಪ್ಸಿಸ್‌ ನ ಸಂಕೇತವಾಗಿರಬಹುದು. ಇದು ಅಪಾಯಕಾರಿ. ವಾಂತಿ, ಬೇಧಿ, ಅತಿಯಾದ ರಕ್ತಸ್ರಾವಕ್ಕೂ ಇದು ಮುನ್ಸೂಚನೆ ಆಗಿರಬಹುದು. ಆಗಾಗ ನಿಮಗೆ ಬಾಯಾರಿಕೆ ಆಗ್ತಿದ್ದರೆ ಅದನ್ನು ನಿರ್ಲಕ್ಷ್ಯಿಸಬೇಡಿ. ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read