ಚಿಂತಾಮಣಿ: ಪರೀಕ್ಷೆಯಲ್ಲಿ ಉತ್ತರ ತೋರಿಸಿಲ್ಲ ಎಂದು ವಿದ್ಯಾರ್ಥಿ ಮೇಲೆ ಮತ್ತೊಬ್ಬ ವಿದ್ಯಾರ್ಥಿ ಮತ್ತು ಆತನ ಸಹಚರರು ಹಲ್ಲೆ ನಡೆಸಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಚೇಳೂರಿನ ಮಂಜುನಾಥ್(21) ಹಲ್ಲೆಗೊಳಗಾದ ಯುವಕ ಚಿಂತಾಮಣಿ ಶಾಂತಿನಗರದ ನಂದೀಶ್ ಮತ್ತು ಸ್ನೇಹಿತರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಡಿಸೆಂಬರ್ 26ರಂದು ಚಿಂತಾಮಣಿಯ ಖಾಸಗಿ ಕಾಲೇಜಿನಲ್ಲಿ ಫೈನಾನ್ಸಿಯಲ್ ಅಕೌಂಟಿಂಗ್ ಪರೀಕ್ಷೆ ಬರೆಯುವ ವೇಳೆ ಹಿಂದೆ ಕುಳಿತಿದ್ದ ನಂದೀಶ್ ಉತ್ತರ ತೋರಿಸುವಂತೆ ಬಲವಂತ ಮಾಡಿದ್ದಾನೆ. ಇದಕ್ಕೆ ಮಂಜುನಾಥ್ ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗಿದೆ.