ʼಬಡ್ತಿʼ ಬೇಕಾದರೆ ಕಚೇರಿಯಿಂದಲೇ ಕೆಲಸ ಮಾಡಿ; ಉದ್ಯೋಗಿಗಳಿಗೆ Google ಮಾಜಿ CEO ಸಲಹೆ

ಕೋವಿಡ್‌ ಸಂದರ್ಭದಲ್ಲಿ ಆರಂಭಗೊಂಡ ʼವರ್ಕ್‌ ಫ್ರಂ ಹೋಂʼ ಸಂಸ್ಕೃತಿ ಈಗ ಕಂಪನಿಗಳ ಅವಿಭಾಜ್ಯ ಅಂಗವಾಗಿ ಪರಿಣಮಿಸಿದೆ. ಇದರ ಮಧ್ಯೆ ಗೂಗಲ್‌ ಮಾಜಿ ಸಿಇಒ ನೀಡಿರುವ ಸಲಹೆಯೊಂದು ಚರ್ಚೆಯನ್ನು ಹುಟ್ಟುಹಾಕಿದೆ.

ಗೂಗಲ್‌ನ ಮಾಜಿ ಸಿಇಒ ಇ ರಿಕ್ ಸ್ಮಿತ್, ಉದ್ಯೋಗಿಗಳು ತಮ್ಮ ವೃತ್ತಿಜೀವನವನ್ನು ಮುನ್ನಡೆಸುವ ಕುರಿತು ಗಂಭೀರವಾಗಿದ್ದರೆ ಕಚೇರಿಯಿಂದಲೇ ಕೆಲಸ ಮಾಡಲು ಆದ್ಯತೆ ನೀಡುವಂತೆ ಸಲಹೆ ನೀಡಿದ್ದು, ಈ ಮೂಲಕ ಅವರು ಚರ್ಚೆಯನ್ನು ಹುಟ್ಟುಹಾಕಿದ್ದಾರೆ.

ʼದಿ ಡೈರಿ ಆಫ್ ಎ ಸಿಇಒʼ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡುತ್ತಾ, ಸ್ಮಿತ್ ತನ್ನ ಆರಂಭಿಕ ವೃತ್ತಿಜೀವನದ ಬಗ್ಗೆ ಹೇಳಿಕೊಂಡರಲ್ಲದೇ ಕಲಿಕೆ ಮತ್ತು ವೃತ್ತಿಪರ ಬೆಳವಣಿಗೆಗೆ ವ್ಯಕ್ತಿಗತ ಸಂವಹನಗಳ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು.

2001 ರಿಂದ 2011 ರವರೆಗೆ ಗೂಗಲ್ ಅನ್ನು ಮುನ್ನಡೆಸಿದ್ದ ಸ್ಮಿತ್ ಅವರು “ನೀವು ನಿಮ್ಮ 20 ರ ಹರೆಯದಲ್ಲಿದ್ದರೆ, ನೀವು ಕಚೇರಿಯಲ್ಲಿ ಇರಲು ಬಯಸುತ್ತೀರಿ, ಏಕೆಂದರೆ ನೀವು ಈ ಮೂಲಕ ಬಡ್ತಿ ಪಡೆಯಲಿದ್ದೀರಿ” ಎಂದು ಹೇಳಿದರು.

ಸ್ಮಿತ್ ಅವರ ಅಭಿಪ್ರಾಯವು ಇತರ ಟೆಕ್ ಮುಖ್ಯಸ್ಥರು ವ್ಯಕ್ತಪಡಿಸಿದ ಇದೇ ರೀತಿಯ ಭಾವನೆಗಳನ್ನು ಪ್ರತಿಧ್ವನಿಸುತ್ತದೆ. ಉದಾಹರಣೆಗೆ, ಮೆಟಾ, ಈಗ ತನ್ನ ನೌಕರರು ವಾರದಲ್ಲಿ ಕನಿಷ್ಠ ಮೂರು ದಿನ ಕಚೇರಿಯಲ್ಲಿರಬೇಕು ಎಂದು ಸೂಚಿಸಿದೆ. ಸಿಇಒ ಮಾರ್ಕ್ ಜುಕರ್‌ಬರ್ಗ್, ಕಚೇರಿಯಲ್ಲಿ ಕೆಲಸ ಮಾಡುವ ಎಂಜಿನಿಯರ್‌ಗಳು ಮನೆಯಿಂದ ಕೆಲಸ ಮಾಡುವವರಿಗಿಂತ ಹೆಚ್ಚು ಉತ್ಪಾದಕರಾಗಿದ್ದಾರೆ ಎಂದಿದ್ದಾರೆ.

2022 ರಿಂದ ನೌಕರರು ವಾರಕ್ಕೆ ಮೂರು ದಿನ ಕಚೇರಿಯಿಂದ ಕೆಲಸ ಮಾಡುವ ಅಗತ್ಯವಿರುವ ಹೈಬ್ರಿಡ್ ಕೆಲಸದ ಮಾದರಿಯನ್ನು Google ಅನುಸರಿಸುತ್ತದೆ ಎಂದು ವರದಿಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read