FUNNY VIDEO | ಇಂತಹ ಫೀಲ್ಡಿಂಗ್‌ ಅನ್ನು ನೀವೆಂದೂ ನೋಡಿರಲಿಕ್ಕೆ ಸಾಧ್ಯವೇ ಇಲ್ಲ…!

ಐಪಿಎಲ್ ಸನಿಹವಾಗುತ್ತಿರುವಂತೆ ದೇಶದೆಲ್ಲೆಡೆ ಕ್ರಿಕೆಟ್ ಜ್ವರ ಹೆಚ್ಚುತ್ತಲೇ ಸಾಗಿದೆ. ಇದೇ ವೇಳೆ ಗಲ್ಲಿ ಕ್ರಿಕೆಟ್ ಹಾಗೂ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಗಳ ವಿಡಿಯೋ ಕ್ಲಿ‌ಪ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಇನ್ನಷ್ಟು ವೈರಲ್ ಆಗುತ್ತಿವೆ.

ಇಂಥದ್ದೇ ಒಂದು ನಿದರ್ಶನದಲ್ಲಿ, ಟೆನಿಸ್ ಬಾಲ್ ಟೂರ್ನಮೆಂಟ್ ಒಂದರ ಪಂದ್ಯದಲ್ಲಿ ಬ್ಯಾಟರ್‌ ಬ್ಯಾಟಿನಿಂದ ತನ್ನತ್ತ ನಿಧಾನ ಗತಿಯಲ್ಲಿ ಬಂದ ಚೆಂಡನ್ನು ಆರಾಮವಾಗಿ ಹಿಡಿದು ಮರಳಿಸುವ ಬದಲು ಕಂಡು ಕೇಳರಿಯದ ರೀತಿಯಲ್ಲಿ ಎಡವಟ್ಟು ಮಾಡಿಕೊಂಡ ಕ್ಷೇತ್ರ ರಕ್ಷಕರೊಬ್ಬರು ಅದನ್ನು ಹಾಗೇ ಬೌಂಡರಿಗೆ ತಳ್ಳಿಕೊಂಡು ಸಾಗಿರುವ ವಿಡಿಯೋ ನೋಡುಗರನ್ನು ನಗೆಗಡಲಲ್ಲಿ ತೇಲಿಸಿದೆ.

ತಮ್ಮತ್ತಲೇ ಸಲೀಸಾಗಿ ಪುಟಿದು ಬಂದ ಚೆಂಡನ್ನು ಆರಾಮವಾಗಿ ಹಿಡಿಯಲು ಆಗದೇ, ಅದನ್ನು ಹಾಗೇ ತಳ್ಳಾಡಿಕೊಂಡು ಬೌಂಡರಿಯತ್ತ ಸಾಗುವ ಕ್ಷೇತ್ರ ರಕ್ಷಕ ಕೊನೆಗೆ ಎಡವಿ ಬಿದ್ದು, ಚೆಂಡನ್ನು ಕಾಲಿನಿಂದ ಬೌಂಡರಿಯಾಚೆಗೆ ಒದೆಯುವುದನ್ನು ನೋಡಿದ ನೆಟ್ಟಿಗರು ಭಾರೀ ಫನ್ನಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.

“ಒಂದಿಡೀ ವರ್ಷಕ್ಕೆ ಬೇಕಾಗುವಷ್ಟು ಅದೃಷ್ಟವನ್ನು ಆ ಬ್ಯಾಟುಗಾರ ಈ ಒಂದು ಚೆಂಡಿನಲ್ಲಿ ಕಂಡುಕೊಂಡಿದ್ದಾನೆ,” ಎಂದು ವಿಡಿಯೋ ನೋಡಿದ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.

“ಫುಟ್ಬಾಲರ್‌ ಆಗಬೇಕೆಂಬ ಕನಸು ಕಂಡಿದ್ದ ನಿಮಗೆ, ನೀವು ಭಾರತೀಯನಾದ ಕಾರಣ ಕ್ರಿಕೆಟರ್‌ ಆದಾಗ ಹೀಗೆಲ್ಲಾ ಆಗುತ್ತದೆ,” ಎಂದು ಮತ್ತೊಬ್ಬ ಬಳಕೆದಾರ ಬರೆದಿದ್ದಾರೆ.

https://youtu.be/S4yxkrztjM4

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read