ಗ್ರಾಹಕರೆ ಎಚ್ಚರ! ಎವರೆಸ್ಟ್ ಚಿಕನ್ ಮಸಾಲಾದಲ್ಲಿ ಅಪಾಯಕಾರಿ ಅಂಶ ಪತ್ತೆ; ತಕ್ಷಣ ಬಳಕೆ ನಿಲ್ಲಿಸಿ…. ಆಹಾರ ಸುರಕ್ಷತಾ ಅಧಿಕಾರಿಗಳ ಸೂಚನೆ

ಕಾರವಾರ: ಜನಪ್ರಿಯ ಮಸಾಲೆಗಳಲ್ಲಿ ಒಂದಾಗಿರುವ ಎವರೆಸ್ಟ್ ಚಿಕನ್ ಮಸಾಲೆಯಲ್ಲಿ ಅಪಾಯಕಾರಿ ಅಂಶ ಪತ್ತೆಯಾಗಿದ್ದು, ಇದನ್ನು ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚಿಸಿದ್ದಾರೆ.

ಎವರೆಸ್ಟ್ ಚಿಕನ್ ಮಸಾಲೆಯಲ್ಲಿ ಎಥಿಲಿನ್ ಆಕ್ಸೈಡ್ ಪ್ರಮಾಣ ಹೆಚ್ಚಾಗಿದೆ. ಇದು ಮೆಣಸಿನಪುಡಿಗೆ ಬಳಸುವ ಕೀಟನಾಶಕವಾಗಿದ್ದು, ಎವರೆಸ್ಟ್ ಚಿಕನ್ ಮಸಾಲಾದಲ್ಲಿ ಇದು ಅಧಿಕ ಪ್ರಮಾಣದಲ್ಲಿದೆ. ಹಾಗಾಗಿ ಎವೆಸ್ಟ್ ಚಿಕನ್ ಮಸಾಲೆ ಬಳಸದಂತೆ ಗ್ರಾಹಕರಿಗೆ ಉತ್ತರ ಕನ್ನಡ ಜಿಲ್ಲೆಯ ಆಹಾರ ಸುರಕ್ಷತಾ ಅಧಿಕಾರಿ ರಾಜಶೇಖರ್ ಸೂಚಿಸಿದ್ದಾರೆ.

ಮಸಾಲಾ ಪದಾರ್ಥಗಳಲ್ಲಿ ಎಥಿಲಿನ್ ಆಕ್ಸೈಡ್ ಪ್ರಮಾಣ ಶೇ.0.01ರಷ್ಟು ಇರಬೇಕು. ಆದರೆ ಎವರೆಸ್ಟ್ ಚಿಕನ್ ಮಸಾಲೆಯಲ್ಲಿ ಶೇ.3.93ರಷ್ಟಿದೆ. ಇಷ್ಟೊಂದು ಪ್ರಮಾಣದಲ್ಲಿ ಎಥಿನಿಲ್ ಪ್ರಮಾಣ ಬಳಕೆ ಹಾನಿಕಾರಕ. ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಹೀಗಾಗಿ ಸಾರ್ವಜನಿಕರು ಎವರೆಸ್ಟ್ ಚಿಕನ್ ಮಸಾಲೆ ಬಳಸದಂತೆ ತಿಳಿಸಿದ್ದಾರೆ.

ಎವರೆಸ್ಟ್ ಚಿಕನ್ ಮಸಾಲೆ ಬಗ್ಗೆ ಅನುಮಾನವಿದ್ದ ಕಾರಣ ಆಹಾರ ಇಲಾಖೆ ಆಯುಕ್ತರ ಸೂಚನೆ ಮೇರೆಗೆ ನಾವು ಪರೀಕ್ಷೆ ಮಾಡಿದ್ದೆವು. ಎವೆರೆಸ್ಟ್ ಚಿಕನ್ ಮಸಾಲೆಯಲ್ಲಿ ಶೇ.3.93ರಷ್ಟು ಪ್ರಮಾಣದಲ್ಲಿ ಎಥೆಲಿನ್ ಆಕ್ಸೈಡ್ ಇರುವುದು ಪತ್ತೆಯಾಗಿದೆ. ಹಾಗಾಗಿ ಈಗಾಗಲೇ ಎವೆರೆಸ್ಟ್ ಮಸಾಲಾ ಕಂಪನಿಗೂ ನೋಟಿಸ್ ನೀಡಿದ್ದೇವೆ. ತಕ್ಷಣ ಎವೆರೆಸ್ಟ್ ಚಿಕನ್ ಮಸಾಲಾ ಪ್ಯಾಕೇಟ್ ಸರಬರಾಜು ನಿಲ್ಲಿಸಸಲು ಸೂಚಿಸಿದ್ದೇವೆ.

ಕರ್ನಾಟಕದಲ್ಲಿ ಮಾತ್ರವಲ್ಲ ದೇಶಾದ್ಯಂತ ಈಗಾಗಲೇ ಪೂರೈಸಿರುವ ಎವೆರೆಸ್ಟ್ ಚಿಕನ್ ಮಸಾಲಾ ಹಿಂಪಡೆಯಬೇಕು. ಜನರು ಎವೆರೆಸ್ಟ್ ಚಿಕನ್ ಮಸಾಲಾ ಖರೀದಿಸಿದ್ದರೆ ತಕ್ಷಣ ಅಂಗಡಿಗಳಿಗೆ ವಾಪಾಸ್ ನೀಡಿ. ಈಗಾಗಲೇ ಕಂಪನಿ ಪೌಡರ್ ಹಿಂಪಡೆಯುವ ಕೆಲಸ ಮಾಡುತ್ತಿದೆ. ಕಂಪನಿ ವಿರುದ್ಧ ಪ್ರಕರಣವನ್ನೂ ದಾಖಲಿಸುತ್ತೇವೆ ಎಂದು ತಿಳಿಸಿದ್ದಾರೆ.

ಇನ್ನು ಎವರೆಸ್ಟ್ ಚಿಕನ್ ಮಸಾಲಾ ಮಾತ್ರವಲ್ಲ 15 ತರಹದ ಮಸಾಲಾ ಪುಡರ್ ಗಳನ್ನು ತಪಾಸಣೆಗೆ ಕಳುಹಿಸಲಾಗಿದೆ. ಎಂಟಿಆರ್ ಮಸಾಲೆ ಬಗ್ಗೆ ಈವರೆಗೆ ಪರೀಕ್ಷೆ ಮಾಡಲಾಗಿಲ್ಲ ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read