ʼಕಭಿ ಖುಷಿ ಕಭಿ ಘಮ್ʼ ಸಿನಿಮಾದಲ್ಲಿನ ರಾಯಚಂದ್ ಕುಟುಂಬದ ಭವ್ಯ ಮನೆ ಎಲ್ಲಿದೆ ಗೊತ್ತಾ ?

ನೀವು ಕರಣ್ ಜೋಹರ್ ಅವರ ಕಭಿ ಖುಷಿ ಕಭಿ ಘಮ್ ಸಿನಿಮಾವನ್ನು ವೀಕ್ಷಿಸಿದ್ದೀರಾ? ನಟರಾದ ಶಾರುಖ್ ಖಾನ್, ಅಮಿತಾಬ್ ಬಚ್ಚನ್, ಜಯಾ ಬಚ್ಚನ್, ಕಾಜೋಲ್, ಹೃತಿಕ್ ರೋಷನ್ ಮತ್ತು ಕರೀನಾ ಕಪೂರ್ ನಟಿಸಿದ ಈ ಚಲನಚಿತ್ರವು 2001 ರಲ್ಲಿ ಬಿಡುಗಡೆಯಾಯಿತು.

ಸಿನಿಮಾದ ಹಾಡುಗಳಿಂದ ಹಿಡಿದು, ದೇಸಿ ಕುಟುಂಬದ ಸಂಸ್ಕಾರದ ನಿಯಮಗಳು ಹಾಗೂ ಶಾರುಖ್-ಕಾಜೋಲ್ ನಡುವಿನ ಪ್ರೇಮ ಕಥನ ಎಲ್ಲರನ್ನೂ ಮನರಂಜಿಸಿದೆ. ಆದರೆ, ಈ ಚಿತ್ರದಲ್ಲಿ ರಾಯಚಂದ್ ಮನೆ ಎಂದು ತೋರಿಸಿರುವ ಭವ್ಯ ಭವನದ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ?

ಹೌದು, ಎಕರೆಗಟ್ಟಲೆ ಹಚ್ಚ ಹಸಿರಿನ ತೋಟಗಳನ್ನು ಹೊಂದಿರುವ ಸುಂದರವಾದ ಆಸ್ತಿಯು ರಾಯಚಂದ್ ಕುಟುಂಬದ ದೆಹಲಿಯ ಮನೆ ಎಂದು ಸಿನಿಮಾದಲ್ಲಿ ಹೇಳಲಾಗುತ್ತದೆ. ಇದು ರಾಜಧಾನಿಯ ಅತ್ಯಂತ ಜನದಟ್ಟಣೆಯ ಸ್ಥಳಗಳಲ್ಲಿ ಒಂದಾದ ಚಾಂದಿನಿ ಚೌಕ್‌ನಲ್ಲಿದೆ ಎಂದು ಸಿನಿಮಾದಲ್ಲಿ ಹೇಳಲಾಗುತ್ತದೆ. ಆದರೆ, ನಿಜವಾಗಲೂ ಈ ಶೂಟಿಂಗ್ ಸ್ಥಳವು ಬಕಿಂಗ್ಹ್ಯಾಮ್‌ಶೈರ್‌ನ ವಾಡೆಸ್‌ಡನ್ ಗ್ರಾಮದ ಪಶ್ಚಿಮ ತುದಿಯಲ್ಲಿರುವ ವಾಡೆಸ್‌ಡನ್ ಮ್ಯಾನರ್ ನಲ್ಲಿದೆ. ಅಂದರೆ, ನಿಜವಾಗಿಯೂ ಈ ಭವನ ವಿದೇಶದ್ದು, ದೆಹಲಿಯ ಚಾಂದಿನಿ ಚೌಕ್ ನಲ್ಲಿಲ್ಲ.

ಟ್ವಿಟ್ಟರ್ ಬಳಕೆದಾರರಾದ ಶ್ರುತಿ ಸೋನಾಲ್ ಎಂಬುವವರು ಇದನ್ನು ಪೋಸ್ಟ್‌ ಮಾಡಿದ್ದಾರೆ. ಇದು ದೆಹಲಿಯಲ್ಲಿರುವ ಮನೆ ಮತ್ತು ಚಾಂದಿನಿ ಚೌಕ್‌ನಿಂದ ಕಾಲ್ನಡಿಗೆಯ ದೂರದಲ್ಲಿದೆ ಎಂದು ಕರಣ್ ಜೋಹರ್ ನಮ್ಮನ್ನು ನಂಬುವಂತೆ ಮಾಡಿದ್ದಾರೆಂದು ನನಗೆ ಇನ್ನೂ ನಂಬಲಾಗುತ್ತಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ.

ಈ ಪೋಸ್ಟ್ 1.2 ಮಿಲಿಯನ್ ವೀಕ್ಷಣೆಗಳು ಮತ್ತು ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ಸಿನಿಮಾದಲ್ಲಿ ಹೃತಿಕ್‌ನ ಪಾತ್ರವು ಅಧಿಕ ತೂಕದ ಮಗುವಿನಿಂದ ವಯಸ್ಕನಾಗಿ ರೂಪಾಂತರಗೊಳ್ಳುವುದು ಸಹ ಅವರು ನಿಜವೆಂದು ನಂಬಿದ್ದರು ಎಂದು ಹಲವರು ಹೇಳಿದ್ದಾರೆ.

https://twitter.com/shrutisonal26/status/1658512941103333378?ref_src=twsrc%5Etfw%7Ctwcamp%5Etweetembed%7Ctwterm%5E1658512941103333378%7Ctwgr%5Edb117fd9629fd54e75534548270e3fe8b2280d49%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fever-had-second-thoughts-about-the-delhi-mansion-of-raichand-family-in-k3g-see-hilarious-tweet-2380553-2023-05-17

https://twitter.com/amitarunk/status/1658715466590990336?ref_src=twsrc%5Etfw%7Ctwcamp%5Etweetembed%7Ctwterm%5E1658715466590990336%7Ctwgr%5Edb117fd9629fd54e75534548270e3fe8b2280d49%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fever-had-second-thoughts-about-the-delhi-mansion-of-raichand-family-in-k3g-see-hilarious-tweet-2380553-2023-05-17

https://twitter.com/rigils/status/1658566665863417867?ref_src=twsrc%5Etfw%7Ctwcamp%5Etweetembed%7Ctwterm%5E1658566665863417867%7Ctwgr%5Edb117fd9629fd54e75534548270e3fe8b2280d49%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fever-had-second-thoughts-about-the-delhi-mansion-of-raichand-family-in-k3g-see-hilarious-tweet-2380553-2023-05-17

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read