ಅಪ್ಪಿತಪ್ಪಿಯೂ ಇವುಗಳನ್ನು ಸೇವಿಸಿದ ತಕ್ಷಣ ʼನೀರುʼ ಕುಡಿಯಬೇಡಿ

ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಉತ್ತಮ. ದೇಹಕ್ಕೆ ಸಾಕಷ್ಟು ನೀರಿನಾಂಶ ಬೇಕಾಗಿರುವುದರಿಂದ ಪ್ರತಿಯೊಬ್ಬರು ದಿನಕ್ಕೆ 6ರಿಂದ 10 ಲೋಟ ನೀರು ಕುಡಿಯಬೇಕು. ಆದರೆ ಇವುಗಳನ್ನು ಸೇವಿಸಿದಾಗ ಮಾತ್ರ ಅಪ್ಪಿತಪ್ಪಿಯೂ ನೀರನ್ನು ಸೇವಿಸಬೇಡಿ.

*ಹುರಿದ ಕಡಲೆಯನ್ನು ತಿಂದ ತಕ್ಷಣ ನೀರನ್ನು ಕುಡಿಯಬೇಡಿ. ನೀರನ್ನು ಕುಡಿದರೆ ಕಡಲೆ ಸರಿಯಾಗಿ ಜೀರ್ಣವಾಗದೆ ಹೊಟ್ಟೆ ನೋವು ಶುರುವಾಗುತ್ತದೆ.

*ಪೇರಳೆ ಹಣ್ಣನ್ನು ಸೇವಿಸಿದ ತಕ್ಷಣ ನೀರನ್ನು ಕುಡಿಯುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಬಿಡುಗಡೆಯಾಗುತ್ತದೆ. ಬೀಜಗಳು ಸರಿಯಾಗಿ ಜೀರ್ಣವಾಗದೆ ಹೊಟ್ಟೆನೋವು ಕಾಣಸಿಕೊಳ್ಳುತ್ತದೆ.

*ಐಸ್ ಕ್ರೀಂ ತಿಂದ ತಕ್ಷಣ ನೀರು ಕುಡಿಯಬೇಡಿ. ಇದರಿಂದ ಹಲ್ಲುಗಳಲ್ಲಿ ನೋವು, ಗಂಟಲಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಐಸ್ ಕ್ರೀಂ ತಿಂದ 10 ನಿಮಿಷದ ಬಳಿಕ ನೀರನ್ನು ಕುಡಿಯಿರಿ.

*ಚಹಾ-ಕಾಫಿ ಕುಡಿದ ತಕ್ಷಣ ನೀರನ್ನು ಕುಡಿಯಬೇಡಿ. ಇದರಿಂದ ಜೀರ್ಣಾಂಗ ವ್ಯವಸ್ಥೆ ನಿಧಾನವಾಗಿ ಸರಿಯಾಗಿ ಮಲ ವಿಸರ್ಜನೆ ಆಗುವುದಿಲ್ಲ.

*ಬಾಳೆಹಣ್ಣು, ಸಪೋಟಾ, ಸೇಬು, ಅನಾನಸ್, ದಾಳಿಂಬೆ ಇತ್ಯಾದಿ ಹಣ್ಣುಗಳನ್ನು ಸೇವಿಸಿದ ತಕ್ಷಣ ನೀರನ್ನು ಸೇವಿಸಬೇಡಿ. ಇದರಿಂದ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತದೆ.

*ನೆಲಗಡಲೆ ಸೇವಿಸಿದ ಕೂಡಲೇ ನೀರು ಕುಡಿಯಬೇಡಿ. ಇದರಿಂದ ಕೆಮ್ಮಿನ ಸಮಸ್ಯೆ ಕಾಡುತ್ತದೆ.

* ಊಟ ಮಾಡಿದ ತಕ್ಷಣ ನೀರನ್ನು ಕುಡಿಯಬೇಡಿ. ಇದರಿಂದ ಜೀರ್ಣ ಕ್ರಿಯೆ ಸರಿಯಾಗಿ ಆಗುವುದಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read