ನಾಳೆ ಬಿಡುಗಡೆಯಾಗಲಿದೆ ‘ಮರ್ಯಾದೆ ಪ್ರಶ್ನೆ’ ಟ್ರೈಲರ್

ಈಗಾಗಲೇ ತನ್ನ ಟೈಟಲ್ ಇಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ನಾಗರಾಜ್ ಸೋಮಯಾಜಿ ನಿರ್ದೇಶನದ ‘ಮರ್ಯಾದೆ ಪ್ರಶ್ನೆ’ ಚಿತ್ರದ ಟ್ರೈಲರ್ ನಾಳೆ ಸಕ್ಕತ್ ಸ್ಟುಡಿಯೋ youtube ಚಾನೆಲ್ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಇಂದು ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ.

ಈ ಚಿತ್ರವನ್ನು ಸಕ್ಕತ್ ಸ್ಟುಡಿಯೋ ಪ್ರೈವೇಟ್ ಲಿಮಿಟೆಡ್ ಬ್ಯಾನರ್ ನಲ್ಲಿ ಶ್ವೇತಾ ಪ್ರಸಾದ್ ಹಾಗೂ ವಿದ್ಯಾ ಗಾಂಧಿ ರಾಜನ್ ನಿರ್ಮಾಣ ಮಾಡಿದ್ದು, ರಾಕೇಶ್ ಅಡಿಗ ಸೇರಿದಂತೆ ಸುನೀಲ್ ರಾವ್, ಪೂರ್ಣಚಂದ್ರ ಮೈಸೂರು, ತೇಜು ಬೆಳವಾಡಿ, ಪ್ರಭು ಮುಂಡ್ಕೂರು, ಶೈನ್ ಶೆಟ್ಟಿ, ಶ್ರವಣ್ ಕುಮಾರ್, ಹರಿಹರನ್ ವಿ, ಮಹೇಶ್ ನಂಜುಂಡಯ್ಯ, ಟಿ ಎಸ್ ನಾಗಾಭರಣ, ಪ್ರಕಾಶ್ ತೂಮಿನಾಡ್, ನಂದಗೋಪಾಲ್, ಶ್ವೇತಾ ಆರ್ ಪ್ರಸಾದ್, ಮಂಜು ಪಾವಗಡ, ದಯಾಳ್ ಪದ್ಮನಾಭನ್, ​​ಕೃತಿ ಶೆಟ್ಟಿ, ರೂಪ ರಾಯಪ್ಪ, ಪೃಥ್ವಿ ಬನವಾಸಿ, ರೇಖಾ ಕೂಡ್ಲಿಗಿ ಬಣ್ಣ ಹಚ್ಚಿದ್ದಾರೆ. ಸಂಕೇತ್ ಶಿವಪ್ಪ ಸಂಕಲನ, ಸಂದೀಪ್ ವಲ್ಲೂರಿ   ಛಾಯಾಗ್ರಹಣ, ಹಾಗೂ ಅರ್ಜುನ್ ರಾಜ್ ಸಾಹಸ ನಿರ್ದೇಶನವಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read