46 ಮೀ ಉದ್ದದ ’ಮೀಸೆ ಸರಪಳಿ’ ರಚಿಸಿದ 69 ಮಂದಿಯಿಂದ ವಿಶ್ವದಾಖಲೆ

ಭಾರೀ ಮೀಸೆ ಬಿಟ್ಟಿದ್ದ 69 ಪುರುಷರು ತಮ್ಮ ಮೀಸೆಗಳನ್ನು ಜೋಡಿಸಿಕೊಂಡು ವೃತ್ತವೊಂದನ್ನು ರಚಿಸಿದ್ದಾರೆ. ಅಮೆರಿಕದ ವ್ಯೋಮಿಂಗ್‌ನ ಕ್ಯಾಸ್ಪರ್‌ ಪಟ್ಟಣದಲ್ಲಿ ಹೀಗೆ ಮೀಸೆ ಹೊತ್ತ ಗಂಡಸರು ಗಿನ್ನೆಸ್ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ.

ರಾಷ್ಟ್ರೀಯ ಗಡ್ಡ ಹಾಗೂ ಮೀಸೆ ಚಾಂಪಿಯನ್‌ಶಿಪ್‌ನಲ್ಲಿ ಭಾಗಿಯಾಗಲು ಜಗತ್ತಿನ ಅನೇಕ ಪ್ರದೇಶಗಳಿಂದ ಕ್ಯಾಸ್ಪರ್‌ಗೆ ಜನರು ಆಗಮಿಸಿದ್ದರು. ಸ್ಫರ್ಧೆಯ ಹಿಂದಿನ ರಾತ್ರಿ ಕೆಲ ಸ್ಫರ್ಧಿಗಳು ಪಬ್ ಒಂದರ ಬಳಿ ನೆರೆದು ಜಗತ್ತಿನ ಅತಿ ಉದ್ದದ ಮೀಸೆ ಸರಪಳಿ ರಚಿಸಿದ್ದಾರೆ.

ಹೀಗೆ ರಚಿಸಿದ ಮೀಸೆ ಸರಪಳಿಯು ಒಟ್ಟಾರೆ 45.99 ಮೀಟರ್‌ (150 ಅಡಿ 10.75 ಇಂಚು) ಉದ್ದವಿತ್ತು. 2007ರಲ್ಲಿ ಜರ್ಮನಿಯ ಮೀಸೆಧಾರಿಗಳು ರಚಿಸಿದ್ದ 19.05 ಮೀ (62 ಅಡಿ 6 ಇಂಚು) ಮೀಸೆ ಸರಪಳಿ ಇದುವರೆಗೂ ದಾಖಲೆ ಹೊಂದಿತ್ತು.

https://youtu.be/XQ0Ne0orvXg

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read