ಬೆಂಗಳೂರು: ಇಇಎಫ್ ಒ ಸ್ಟಾಫ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವಂಚಮ್ನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೊಸೈಟಿ ಸಿಇಒ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಸಿಬ್ಬಂದಿಗಳೇ ಸೇರಿಕೊಂಡಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಮಾಡಿಕೊಂಡು ಕಳೆದ 61 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದರು. ಸೊಸೈಟಿಯಲ್ಲಿ ಇಪಿಎಫ್ ಸಿಬ್ಬಂದಿ, ನಿವೃತ್ತ ಸಿಬ್ಬಂದಿಗಳು ಹಣ ಹೂಡಿಕೆ ಮಾಡಿದ್ದರು. ಡೆಪಾಸಿಟ್ ಇಟ್ಟವರಿಗೆ ಪ್ರತಿ ತಿಂಗಳು ಬಡ್ಡಿಹಣ ಬರುತ್ತಿತ್ತು. ಆದರೆ ಕಳೆದ ಮೂರು ತಿಂಗಳಿಂದ ಬಡ್ಡಿಹಣ ಬರುವುದು ನಿಂತಿತ್ತು. ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಸೊಸೈಟಿಯಲ್ಲಿ ಎಫ್ ಡಿ ಹಣ ಇಲ್ಲದಿರುವುದು ಪತ್ತೆಯಾಗಿದೆ.
ಸೊಸೈಟಿಯಲ್ಲಿ ೩ ಕೋಟಿಯಷ್ಟು ಸಾಲವಿದ್ದು, ಉಳಿದ ಹಣವನ್ನು ಸೊಸೈಟಿ ಸಿಇಒ ಗೋಪಿ, ಹಾಗೂ ಸಿಬ್ಬಂದಿಗಳು ದುರ್ಮಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣ ಸಂಬಂಧ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸಿಇಒ ಗೋಪಿ ಹಾಗೂ ಸಿಬ್ಬಂದಿ ಲಕ್ಷ್ಮೀ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
