ಹೆಚ್ಚಳವಾಗಲಿದೆಯಾ ಖಾಸಗಿ ನೌಕರರ ಪಿಂಚಣಿ ? ಎಲ್ಲರ ಚಿತ್ತ ಕೇಂದ್ರ ಸರ್ಕಾರದತ್ತ !

ಕೇಂದ್ರ ಸರ್ಕಾರ ತನ್ನ ನೌಕರರ ಪಿಂಚಣಿ ಹೆಚ್ಚಳ ಮಾಡಿದ್ದರಿಂದ, ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರಿಗೂ ತಮ್ಮ ಪಿಂಚಣಿ ಹೆಚ್ಚಿಸಬೇಕು ಎಂಬ ನಿರೀಕ್ಷೆ ಇದೆ. ಚೆನ್ನೈ ಇಪಿಎಫ್ ಪಿಂಚಣಿದಾರರ ಕಲ್ಯಾಣ ಸಂಘ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯ ಅವರಿಗೆ ಪತ್ರ ಬರೆದು ತಿಂಗಳಿಗೆ 9,000 ರೂಪಾಯಿ ಪಿಂಚಣಿ ನೀಡುವಂತೆ ಕೇಳಿದೆ.

  • ಈಗಾಗಲೇ ಇಪಿಎಫ್‌ಒ ಪಿಂಚಣಿ ಯೋಜನೆಯಲ್ಲಿ ಸುಮಾರು 75 ಲಕ್ಷ ಜನರು ಇದ್ದಾರೆ.
  • ಸರ್ಕಾರದ ನೌಕರರಿಗೆ ಪಿಂಚಣಿ ಹೆಚ್ಚಳ ಮಾಡಿದಂತೆ ನಮಗೂ ಮಾಡಬೇಕು ಎಂದು ಅವರು ಕೇಳುತ್ತಿದ್ದಾರೆ.
  • ಕಳೆದ ಜುಲೈನಲ್ಲಿ ದೆಹಲಿಯಲ್ಲಿ ಇಪಿಎಸ್-95 ರಾಷ್ಟ್ರೀಯ ಹೋರಾಟ ಸಮಿತಿ 7,500 ರೂಪಾಯಿ ಪಿಂಚಣಿಗೆ ಹೋರಾಟ ಮಾಡಿತ್ತು.
  • ಈ ಸಮಿತಿಯಲ್ಲಿ 78 ಲಕ್ಷ ಪಿಂಚಣಿದಾರರು ಮತ್ತು 7.5 ಕೋಟಿ ಕೆಲಸ ಮಾಡುವ ನೌಕರರು ಇದ್ದಾರೆ.
  • ಈಗಾಗಲೇ ಕೇಂದ್ರ ಸರ್ಕಾರ 2014 ರಲ್ಲಿ 1000 ರೂಪಾಯಿ ಪಿಂಚಣಿ ನೀಡುತ್ತಿದೆ.
  • ಕಾರ್ಮಿಕ ಸಚಿವಾಲಯ ಪಿಂಚಣಿ 2000 ರೂಪಾಯಿಗೆ ಹೆಚ್ಚಿಸಲು ಹಣಕಾಸು ಸಚಿವಾಲಯಕ್ಕೆ ಪ್ರಸ್ತಾವನೆ ಕಳುಹಿಸಿದೆ. ಆದರೆ, ಅದಕ್ಕೆ ಇನ್ನೂ ಒಪ್ಪಿಗೆ ಸಿಕ್ಕಿಲ್ಲ.
  • ಪಿಂಚಣಿ ಲೆಕ್ಕಾಚಾರ: (ಕಳೆದ 60 ತಿಂಗಳ ಸರಾಸರಿ ಸಂಬಳ x ಸೇವಾ ವರ್ಷಗಳು) / 70.
  • ಸಂಬಳದ ಮಿತಿಯನ್ನು 15,000 ರೂಪಾಯಿಯಿಂದ 21,000 ರೂಪಾಯಿಗೆ ಹೆಚ್ಚಿಸಲು ಕಾರ್ಮಿಕ ಸಚಿವಾಲಯ ಪ್ರಸ್ತಾವನೆ ಸಲ್ಲಿಸಿದೆ.
  • ಈ ಎಲ್ಲಾ ವಿಚಾರಗಳು ಈಗ ಚರ್ಚೆಯಲ್ಲಿವೆ. ಖಾಸಗಿ ನೌಕರರಿಗೆ ಪಿಂಚಣಿ ಹೆಚ್ಚಳವಾಗುತ್ತದೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.
Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read