ಆರೋಪಿ ಪತ್ನಿಯಿಂದಲೇ ಬಹಿರಂಗವಾಯ್ತು ಖ್ಯಾತ ನಟ, ನಿರ್ದೇಶಕನ ಸಾವಿನ ರಹಸ್ಯ…?

ನವದೆಹಲಿ: ಬಾಲಿವುಡ್ ನಟ-ನಿರ್ದೇಶಕ ಸತೀಶ್ ಕೌಶಿಕ್ ಅವರನ್ನು ತನ್ನ ಪತಿಯೇ ಕೊಲೆ ಮಾಡಿದ್ದಾನೆ ಎಂದು ಮಹಿಳೆಯೊಬ್ಬರು ಹೇಳಿದ ಒಂದು ದಿನದ ನಂತರ ದೆಹಲಿ ಪೊಲೀಸರು ವಿಚಾರಣೆ ಪ್ರಾರಂಭಿಸಿದ್ದಾರೆ. ಮಹಿಳೆಯ ಸಾಕ್ಷ್ಯ ದಾಖಲಿಸಲು ಇನ್ಸ್‌ ಪೆಕ್ಟರ್ ಒಬ್ಬರನ್ನು ನಿಯೋಜಿಸಿದ್ದಾರೆ.

ಆಕೆಯ ಹೇಳಿಕೆ ದಾಖಲಿಸಿಕೊಳ್ಳಲು ತನಿಖೆಗೆ ಹಾಜರಾಗುವಂತೆ ಆಕೆಗೆ ಸಮನ್ಸ್ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಮಹಿಳೆ ಮಾಡಿರುವ ಆರೋಪಗಳು ಗಂಭೀರವಾಗಿರುವುದರಿಂದ ಈ ವರದಿಯನ್ನು ಹಿರಿಯ ಪೊಲೀಸ್ ಅಧಿಕಾರಿಗೆ ಸಲ್ಲಿಸಲಾಗುವುದು. ಹೂಡಿಕೆ ಉದ್ದೇಶಕ್ಕಾಗಿ ನೀಡಿದ್ದ 15 ಕೋಟಿ ರೂ.ಗಾಗಿ ತನ್ನ ಪತಿ ಸತೀಶ್ ಕೌಶಿಕ್‌ನನ್ನು ಕೊಲೆ ಮಾಡಿದ್ದಾರೆ. ತನ್ನ ಗಂಡನಿಂದ ಹಣವನ್ನು ಕೌಶಿಕ್ ವಾಪಸು ಕೇಳುತ್ತಿದ್ದರು ಎಂದು ಮಹಿಳೆ ದೆಹಲಿ ಪೊಲೀಸ್ ಕಮಿಷನರ್ ಕಚೇರಿಗೆ ನೀಡಿದ ದೂರಿನಲ್ಲಿ ಹೇಳಿಕೊಂಡಿದ್ದಾರೆ. ಕೌಶಿಕ್‌ ಗೆ ತನ್ನ ಪತಿ ಕೆಲವು ಮಾತ್ರೆಗಳನ್ನು ನೀಡಿದ್ದ ಎಂದು ಅವರು ಆರೋಪಿಸಿದ್ದಾರೆ.

ದೆಹಲಿಯ ಫಾರ್ಮ್‌ಹೌಸ್‌ನಿಂದ ಕೆಲವು ‘ಔಷಧಿಗಳನ್ನು’ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಾಯುವ ಮೊದಲು ಫಾರ್ಮ್ ಹೌಸ್ ನಲ್ಲಿ ನಡೆದ ಪಾರ್ಟಿಯಲ್ಲಿ ನಟ ಕೌಶಿಕ್ ಅವರು ಭಾಗವಹಿಸಿದ್ದರು. ಇದೀಗ ಮಹಿಳೆಯ ದೂರನ್ನು ದೆಹಲಿ ಪೊಲೀಸರು ಗಂಭೀರವಾಗಿ ಪರಿಗಣಿಸಿ ತನಿಖೆ ಚುರುಕುಗೊಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read