ಬೆಂಗಳೂರು : ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ನೂತನ ಅಧ್ಯಕ್ಷರಾಗಿ ಎನ್ನಾರ್ ಕೆ. ವಿಶ್ವನಾಥ್( NRK Vishwanath) ಆಯ್ಕೆಯಾಗಿದ್ದಾರೆ.
ಕಳೆದ ಸೆಪ್ಟೆಂಬರ್ ನಲ್ಲಿ ಸಂಘದ ಚುನಾವಣೆ ನಡೆದಿದ್ದು, ಎನ್ ಆರ್ ನಂಜುಂಡೇಗೌಡರು ಸಂಘದ ಅಧ್ಯಕ್ಷರಾಗಿದ್ದರು. ಆದರೆ ನಿರ್ದೇಶಕರ ಸಂಘದಲ್ಲಿನ ಗೊಂದಲಗಳಿಂದಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಎನ್.ಆರ್. ನಂಜುಂಡೇಗೌಡ ರಾಜೀನಾಮೆ ನೀಡಿದ್ದರು . ನಂತರ ಅಧ್ಯಕ್ಷ ಸ್ಥಾನ ಖಾಲಿಯಿತ್ತು.
ನಂತರ ಹೊಸ ಸಮಿತಿ ರಚನೆಯಾಗಿದ್ದು, ಚುನಾವಣೆಯಲ್ಲಿ ಅಧಿಕರ ಮತಗಳಿಂದ ವಿಜೇತರಾಗಿದ್ದ ವಿಶ್ವನಾಥ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ನಾಗೇಂದ್ರ ಅರಸ್ ಮತ್ತು ಜಗದೀಶ್ ಕೊಪ್ಪ ಕಾರ್ಯದರ್ಶಿಯಾಗಿ ವಿಶಾಲ್ ಧೀರಜ್ , ಮಳವಳ್ಳಿ ಸಾಯಿಕೃಷ್ಣ ಜಂಟಿ ಕಾರ್ಯದರ್ಶಿಯಾಗಿ ಸಮಿತಿಯಲ್ಲಿದ್ದಾರೆ.
You Might Also Like
TAGGED:nrk vihwanath