ಪಾರ್ಟಿಗಾಗಿ ಕಿಡ್ನಾಪ್‌ ನಾಟಕವಾಡಿದ ಭೂಪ; ಪೊಲೀಸರು ಬಂದಾಗ ಬಯಲಾಯ್ತು ಅಸಲಿಯತ್ತು…!

ಥೈಲ್ಯಾಂಡ್‌ ನಲ್ಲಿ ಪಾರ್ಟಿ ಮಾಡೋದಕ್ಕಾಗಿ ಇಂಗ್ಲೆಂಡ್‌ ವ್ಯಕ್ತಿಯೊಬ್ಬ ಮಾಡಿದ ಕೆಲಸ ಸುದ್ದಿಯಲ್ಲಿದೆ. ಇಂಗ್ಲೆಂಡ್‌ ನ ಇಂಗ್ಲೆಂಡ್‌ನ ಪೋರ್ಟ್ಸ್‌ಮೌತ್‌ನ 48 ವರ್ಷದ ವ್ಯಕ್ತಿ ಇಯಾನ್ ರಾಬಿ, ಪಾರ್ಟಿಗೆ ಹಣ ಪಡೆಯಲು ಕಿಡ್ನಪ್ ನಾಟಕ ಆಡಿದ್ದಾನೆ. ಆದ್ರೆ ಈಗ ಪೊಲೀಸ್‌ ಕೈಗೆ ಸಿಕ್ಕಿಬಿದ್ದು ತೊಂದರೆ ಅನುಭವಿಸುತ್ತಿದ್ದಾನೆ.

ಇರಾನಿ ರಾಬಿ, ಸ್ನೇಹಿತರ ಜೊತೆ ಥೈಲ್ಯಾಂಡ್‌ ಗೆ ಹೋಗಿದ್ದ. ಅಲ್ಲಿ ರಜೆ ವಿಸ್ತರಣೆ ಮಾಡ್ತಾ, ಪಾರ್ಟಿ ಮಾಡ್ತಾ ಸಮಯ ಹಾಳು ಮಾಡ್ತಿದ್ದ. ಆತನ ಕೈನಲ್ಲಿದ್ದ ಹಣ ಖಾಲಿಯಾಗಿ ಕುಟುಂಬಸ್ಥರಿಂದ ಹಣ ಕೂಡ ಪಡೆದಿದ್ದ. ಪದೇ ಪದೇ ಹಣ ಕೇಳ್ತಿದ್ದ ಇಯಾನ್‌ ರಾಬಿಗೆ ಹಣ ನೀಡಲು ಕುಟುಂಬಸ್ಥರು ನಿರಾಕರಿಸಿದ್ದರು. ಹಾಗಾಗಿ ಇಯಾನಿ ಕಿಡ್ನಪ್‌ ನಾಟಕ ಶುರು ಮಾಡಿದ್ದ.

ತನ್ನ ಸ್ನೇಹಿತರಿಗೆ ಹೊಡೆಯುವಂತೆ ಮನವೊಲಿಸಿ, ಅವರಿಂದ ಹೊಡೆತ ತಿಂದ ಹಾಗೂ ಕಿಡ್ನಪ್‌ ಮಾಡಿದ ರೀತಿಯ ಫೋಟೋಗಳನ್ನು ಕುಟುಂಬಸ್ಥರಿಗೆ ಕಳುಹಿಸಿ ಹಣ ನೀಡುವಂತೆ ಕೇಳಿದ್ದ.

ಆತನ ಫೋಟೋ ನೋಡಿ ದಂಗಾದ ಕುಟುಂಬಸ್ಥರು ಹಣ ಕಳುಹಿಸುವ ಬದಲು ಪೊಲೀಸರಿಗೆ ದೂರು ನೀಡಿದ್ದರು. ಅಂತರಾಷ್ಟ್ರೀಯ ಪೊಲೀಸ್ ಸಂಸ್ಥೆ, ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಲ್ಲದೆ, ಪಟ್ಟಾಯದಲ್ಲಿರುವ ಹೋಟೆಲ್‌ನಲ್ಲಿ ಇಯಾನ್‌ ಇರೋದನ್ನು ಪತ್ತೆ ಮಾಡಿತ್ತು.

ಹೊಟೇಲ್‌ ರೂಮ್‌ ತೆರೆಯುತ್ತಿದ್ದಂತೆ ಅಲ್ಲಿ ಸ್ನೇಹಿತರ ಜೊತೆ ಇಯಾನ್‌ ಪಾರ್ಟಿ ಮಾಡ್ತಿದ್ದ. ಇವರ ಬಳಿ ಡ್ರಗ್ಸ್‌ ಹಾಗೂ ಗನ್‌ ಸಿಕ್ಕಿದ್ದು, ಪೊಲೀಸರು ಎಲ್ಲರನ್ನೂ ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read