ವಿರಾಟ್ ಕೊಹ್ಲಿಗೆ ಈ ಹಿಂದೆ ಪ್ರಪೋಸ್ ಮಾಡಿದ್ದ ಮಹಿಳಾ ಕ್ರಿಕೆಟರ್ ಈಗ ಸಂಗಾತಿ ಜೊತೆ ಎಂಗೇಜ್….!

ವಿರಾಟ್ ಕೊಹ್ಲಿಗೆ ಈ ಹಿಂದೆ ಮದುವೆಯಾಗುವಂತೆ ಪ್ರಪೋಸ್ ಮಾಡಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ಇಂಗ್ಲೆಂಡಿನ ಮಹಿಳಾ ಕ್ರಿಕೆಟರ್ ಡ್ಯಾನಿಯಲ್ ವ್ಯಾಟ್ ಗುರುವಾರದಂದು ಸಾಮಾಜಿಕ ಜಾಲತಾಣದಲ್ಲಿ ತಾವು ಜಾರ್ಜಿ ಹೊಡ್ಜ್ ಜೊತೆ ಎಂಗೇಜ್ ಆಗಿರುವುದನ್ನು ಘೋಷಿಸಿದ್ದಾರೆ.

ಸಾಮಾಜಿಕ ಜಾಲತಾಣ instagram ನಲ್ಲಿ ಜಾರ್ಜಿಗೆ ಕಿಸ್ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿರುವ ಡ್ಯಾನಿಯಲ್ ವ್ಯಾಟ್ ತಮ್ಮ ಎಂಗೇಜ್ಮೆಂಟ್ ರಿಂಗ್ ಅನ್ನು ತೋರಿಸಿದ್ದಾರೆ. ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

2014ರಲ್ಲಿ ವಿರಾಟ್ ಕೊಹ್ಲಿಗೆ ಪ್ರಪೋಸ್ ಮಾಡಿ ಟ್ವೀಟ್ ಮಾಡಿದ್ದ ಡ್ಯಾನಿಯಲ್ ವ್ಯಾಟ್, ರಾತ್ರೋರಾತ್ರಿ ಪ್ರಸಿದ್ಧರಾಗಿದ್ದರು. ಅಲ್ಲದೆ ಈಕೆ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಜೊತೆಯೂ ಆತ್ಮೀಯರಾಗಿದ್ದರು. ಇವರಿಬ್ಬರು ಕೈ ಕೈ ಹಿಡಿದುಕೊಂಡು ಓಡಾಡಿದ್ದ ಕೆಲ ಫೋಟೋಗಳು ವೈರಲ್ ಆಗಿದ್ದವು.

ಐಪಿಎಲ್ ಮಾದರಿಯಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಮಹಿಳಾ ಟಿ20 ಟೂರ್ನಿಯಲ್ಲಿ ಆಕಾಂಕ್ಷಿಯಾಗಿದ್ದ ಡ್ಯಾನಿಯಲ್ ವ್ಯಾಟ್ ಅವರನ್ನು ಯಾವುದೇ ತಂಡಗಳು ಖರೀದಿಸಲಿಲ್ಲ. ಹೀಗಾಗಿ ತಮ್ಮ ನಿರಾಸೆ ವ್ಯಕ್ತಪಡಿಸಿ ಅವರು ಟ್ವೀಟ್ ಮಾಡಿದ್ದರು.

ಇದೀಗ 2019 ರಿಂದಲೂ ಡೇಟಿಂಗ್ ನಡೆಸುತ್ತಿದ್ದ ಜಾರ್ಜಿ ಹೊಡ್ಜ್ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಜಾರ್ಜಿ ಮಹಿಳಾ ಫುಟ್ಬಾಲ್ ತಂಡದ ಮುಖ್ಯಸ್ಥರಾಗಿದ್ದು, ಈಕೆ ಗಿಟಾರ್ ನುಡಿಸುವುದರಲ್ಲೂ ಪ್ರವೀಣರಾಗಿದ್ದಾರೆ.

https://twitter.com/Danni_Wyatt/status/452117449375502338?ref_src=twsrc%5Etfw%7Ctwcamp%5Etweetembed%7Ctwterm%5E452117449375502338%7Ctwgr%5Eaf898cc58b3830cafbe846364a4f514158cbd230%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fenglandwomenscricketstardanniwyattgetsengagedtopartnergeorgiehodge-newsid-n476711498

https://twitter.com/Danni_Wyatt/status/1541768003049689089?ref_src=twsrc%5Etfw%7Ctwcamp%5Etweetembed%7Ctwterm%5E1541768003049689089%7Ctwgr%5E25f798c805c43f6d5ab1ba5e14fac701f781ef27%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fenglandwomenscricketstardanniwyattgetsengagedtopartnergeorgiehodge-newsid-n476711498

https://twitter.com/Danni_Wyatt/status/1625416695622795267?ref_src=twsrc%5Etfw%7Ctwcamp%5Etweetembed%7Ctwterm%5E1625416695622795267%7Ctwgr%5Eaf898cc58b3830cafbe846364a4f514158cbd230%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fenglandwomenscricketstardanniwyattgetsengagedtopartnergeorgiehodge-newsid-n476711498

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read