Viral Video | ಇಂಜಿನ್ ಇಲ್ಲದೆ ಚಲಿಸಿದ ರೈಲು; ಅಚ್ಚರಿಯಿಂದ ವೀಕ್ಷಿಸಿದ ಜನ

ಜಾರ್ಖಂಡ್ ನ ಸಾಹೀಬ್ ಗಂಜ್ ಸಮೀಪದ ಬರ್ಹಾವಾ ರೈಲು ಮಾರ್ಗದಲ್ಲಿ ರೈಲಿನ 4 ಬೋಗಿಗಳು ಎಂಜಿನ್ ಇಲ್ಲದೆ ಚಲಿಸಿರುವ ಅಚ್ಚರಿಯ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮಾಲ್ಡಾ ರೈಲು ವಿಭಾಗದ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ರೈಲಿನ ನಾಲ್ಕು ಬೋಗಿಗಳನ್ನು ನಿರ್ವಹಣೆ ಕಾರಣಕ್ಕಾಗಿ ಇಲ್ಲಿ ನಿಲ್ಲಿಸಲಾಗಿತ್ತು ಎಂದು ಹೇಳಲಾಗಿದೆ. ಆಗ ಚಾಲಕನಿರಲಿ ಈ ಬೋಗಿಗಳಿಗೆ ಇಂಜಿನ್ ಸಹ ಇರಲಿಲ್ಲ. ಆದರೂ ಕೂಡ ಇದು ಸರಾಗವಾಗಿ ಚಲಿಸಿದೆ.

ಈ ಘಟನೆಯನ್ನು ಸ್ಥಳದಿಂದ ಸಾರ್ವಜನಿಕರು ಅಚ್ಚರಿಯಿಂದ ವೀಕ್ಷಿಸಿದ್ದು, ಅದೃಷ್ಟವಶಾತ್ ರೈಲು ಬೋಗಿಗಳ ಮೇಲೆ ಯಾರೂ ಇರಲಿಲ್ಲ. ಅಲ್ಲದೆ ರೈಲಿನ ಬೋಗಿಗಳು ಸಹ ಅತ್ಯಂತ ನಿಧಾನಗತಿಯಲ್ಲಿ ಚಲಿಸುತ್ತಿದ್ದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.

ಘಟನೆ ಕುರಿತಂತೆ ಮಾಲ್ಡಾ ರೈಲು ವಿಭಾಗದ ಅಧಿಕಾರಿಗಳು ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ಬಳಿಕ ರೈಲು ಅಧಿಕಾರಿಗಳ ನಿರ್ಲಕ್ಷಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

https://twitter.com/UtkarshSingh_/status/1698401467638620647?ref_src=twsrc%5Etfw%7Ctwcamp%5Etweetembed%7Ctwterm%5E1698401467638620647%7Ctwgr%5E7d7e5ddc237fe10b0022bba567f0a5d3bec726a3%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Flatestly-epaper-dh91bfc27fb6cf46a58e6b6df12965bd61%2Fenginelesstrainrunninginjharkhandvideotraincompartmentsseenmovingwithoutenginenearrailwaycrossinginsahibganjclipgoesviral-newsid-n534452492

https://twitter.com/ABPNews/status/1698545935452958951?ref_src=twsrc%5Etfw%7Ctwcamp%5Etweetembed%7Ctwterm%5E1698545935452958951%7Ctwgr%5E7d7e5ddc237fe10b0022bba567f0a5d3bec726a3%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Flatestly-epaper-dh91bfc27fb6cf46a58e6b6df12965bd61%2Fenginelesstrainrunninginjharkhandvideotraincompartmentsseenmovingwithoutenginenearrailwaycrossinginsahibganjclipgoesviral-newsid-n534452492

https://twitter.com/dhananjaynews/status/1698535235959595455?ref_src=twsrc%5Etfw%7Ctwcamp%5Etweetembed%7Ctwterm%5E1698535235959595455%7Ctwgr%5E7d7e5ddc237fe10b0022bba567f0a5d3bec726a3%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Flatestly-epaper-dh91bfc27fb6cf46a58e6b6df12965bd61%2Fenginelesstrainrunninginjharkhandvideotraincompartmentsseenmovingwithoutenginenearrailwaycrossinginsahibganjclipgoesviral-newsid-n534452492

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read