6 ಸಾವಿರ ಹುದ್ದೆಗೆ 12 ಲಕ್ಷಕ್ಕೂ ಅಧಿಕ ಮಂದಿಯಿಂದ ಅರ್ಜಿ….!

ಮಧ್ಯಪ್ರದೇಶದಲ್ಲಿ ನಿರುದ್ಯೋಗ ಸ್ಥಿತಿಗೆ ಕನ್ನಡಿ ಹಿಡಿದಿರುವಂತೆ 6 ಸಾವಿರ ಪಟ್ವಾರಿ ಹುದ್ದೆಗಳಿಗೆ 12 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

ಅಚ್ಚರಿಯ ಅಂಶವೆಂದರೆ, ಇಂಜಿನಿಯರ್‌ಗಳು ಮತ್ತು ಡಾಕ್ಟರೇಟ್ ಹೊಂದಿರುವವರು ಸೇರಿದಂತೆ 12 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಸರಿಸುಮಾರು 6,000 ಪಟ್ವಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಇದು ರಾಜ್ಯದಲ್ಲಿ ನಿರುದ್ಯೋಗದ ಬಗ್ಗೆ ಕಳವಳ ವ್ಯಕ್ತಪಡಿಸುವಂತೆ ಮಾಡಿದೆ.

ಪಟ್ವಾರಿ ಉದ್ಯೋಗದ ಹುದ್ದೆಯು ಭೂ ಕಂದಾಯ ಅಧಿಕಾರಿಯಾಗಿದ್ದು, ಅರ್ಜಿ ಸಲ್ಲಿಸಲು ಪದವಿ ಪದವಿ ಸಾಕು. ಆದರೆ ಇಂಜಿನಿಯರಿಂಗ್, ವಿಜ್ಞಾನ ಮತ್ತು MBA ಪದವೀಧರರಂತಹ ಉನ್ನತ ವ್ಯಾಸಂಗ ಮಾಡಿರುವ ಅನೇಕರು ಹುದ್ದೆಗೆ ಅರ್ಜಿ ಹಾಕಿದ್ದಾರೆ.

ಥಿಂಕ್ ಟ್ಯಾಂಕ್ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಪ್ರಕಾರ, ಮಧ್ಯಪ್ರದೇಶದ ನಿರುದ್ಯೋಗ ದರವು ಜನವರಿಯಲ್ಲಿ ಶೇಕಡಾ 1.9ರಷ್ಟಿದ್ದರೂ , ಪಟ್ವಾರಿ ಉದ್ಯೋಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಹಾಕಿರೋ ಕಾರಣವನ್ನು ಚಿಂತಿಸುವಂತೆ ಮಾಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read