ಕಂಕರ್ : ಛತ್ತೀಸ್ ಗಢದ ಕಂಕೇರ್ನಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಭಾನುವಾರ ನಡೆದ ಎನ್ ಕೌಂಟರ್ ನಲ್ಲಿ ಓರ್ವ ಪೊಲೀಸ್ ಕಾನ್ಸ್ ಟೇಬಲ್ ಹಾಗೂ ಓರ್ವ ಸಕ್ಸಲ್ 1 ಮೃತಪಟ್ಟಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಛತ್ತೀಸ್ ಗಢ ಪೊಲೀಸರ ಪ್ರಕಾರ, ಛೋಟೆಬೆಥಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಹಿಡೂರ್ ಗ್ರಾಮದ ಬಳಿ ಗುಂಡಿನ ಚಕಮಕಿ ನಡೆದಿದೆ. ಭದ್ರತಾ ಪಡೆಗಳ ಜಂಟಿ ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಅವರ ಮೇಲೆ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಕ್ಸಲರ ಶವ ಪತ್ತೆಯಾದ ಸ್ಥಳದಿಂದ ಎಕೆ -47 ರೈಫಲ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಎನ್ಕೌಂಟರ್ ಮುಗಿದಿದ್ದರೂ, ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಪೊದೆಗಳು ಮತ್ತು ಮರಗಳಲ್ಲಿ ಹೆಚ್ಚಿನ ನಕ್ಸಲರು ಅಡಗಿರಬಹುದು ಎಂದು ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ.
#WATCH | Chhattisgarh: Kanker ASP Avinash Thakur says, "Anti-naxal operations are continuously going on. In a joint operation conducted by BSF, DRG and the Police force, one Naxal was shot dead, and one AK-47 has also been recovered. Constable Ramesh Kurethi also lost his life… pic.twitter.com/Tx0RFtnHxU
— ANI MP/CG/Rajasthan (@ANI_MP_CG_RJ) March 3, 2024