ಉಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿರುವಾಗ, ಸೈನಿಕನ ಗರ್ಭಿಣಿ ಪತ್ನಿ ಮತ್ತು ಸೈನಿಕನ ಭಾವನಾತ್ಮಕ ಪುನರ್ಮಿಲನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡುಗರ ಹೃದಯವನ್ನು ಕಲಕುತ್ತದೆ.
ಆಂಟನ್ ಗೆರಾಶ್ಚೆಂಕೊ ಅವರು ಟ್ವಿಟರ್‌ನಲ್ಲಿ ಇದನ್ನು ಪೋಸ್ಟ್ ಮಾಡಿದ್ದಾರೆ. ಗರ್ಭಿಣಿ ಪತ್ನಿ ತನ್ನ ಪತಿಯನ್ನು ಭೇಟಿಯಾಗಲು ಸಾಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆಕೆ ಪತಿಯನ್ನು ನೋಡಿದ ತಕ್ಷಣ ಓಡಿ ಹೋಗಿ ತಬ್ಬಿಕೊಳ್ಳುವ ಮನ ಮಿಡಿಯುವ ವಿಡಿಯೋ ಇದಾಗಿದೆ.
ವಿಡಿಯೋ ಜೊತೆಗೆ, “ಅವರು 30 ವಾರಗಳಿಂದ ಒಬ್ಬರನ್ನೊಬ್ಬರು ನೋಡಿಲ್ಲ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ಈ ವಿಡಿಯೋ ಟ್ವಿಟರ್‌ನಲ್ಲಿ 24 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಯುದ್ಧವು ತುಂಬಾ ಕ್ರೂರವಾಗಿದೆ ಎಂದು ಹಲವರು ಬರೆದುಕೊಂಡಿದ್ದಾರೆ.
This is what we're fighting for.
They haven't seen each other for 30 weeks.
📹: yanina_sham/Instagram pic.twitter.com/vVrkdlRAln
— Anton Gerashchenko (@Gerashchenko_en) January 3, 2023