ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಟ್ವಿಟರ್‌ನಲ್ಲಿ ಮತ್ತೊಂದು ತಮಾಷೆಯ ಪೋಸ್ಟ್ ಮೂಲಕ ಹೆಸರು ಮಾಡಿದ್ದಾರೆ. ಬಿಳಿ ಬಣ್ಣದ ಅಂಬಾಸಡರ್ ಕಾರೊಂದನ್ನು ಏರುತ್ತಿರುವ ತಮ್ಮದೇ ಚಿತ್ರವನ್ನು ಶೇರ್ ಮಾಡಿದ್ದಾರೆ ಅಲಾಂಗ್.
ಅಮೆರಿಕದಲ್ಲಿ ರಾಜಕೀಯ ನಾಯಕರು ಹಾಗೂ ಉನ್ನತಾಧಿಕಾರಿಗಳ ಓಡಾಟಕ್ಕೆ ಬಳಸುವ ಕಪ್ಪು ಲಿಮೋಸಿನ್‌ಗಳ ಹಾಗೆಯೇ ಭಾರತದ ಶಕ್ತಿ ಕೇಂದ್ರ ದೆಹಲಿಯ ರಾಜಬೀದಿಗಳಲ್ಲಿ ಅಂಬಾಸಡರ್ ಕಾರುಗಳ ಕಾರುಬಾರನ್ನು 1950 ಹಾಗೂ ನಂತರದ ದಶಮಾನಗಳಲ್ಲಿ ದೇಶವಾಸಿಗಳು ಕಂಡಿದ್ದರು.
2014ರಲ್ಲಿ ಈ ಕಾರುಗಳ ಉತ್ಪಾದನೆ ನಿಲ್ಲಿಸಿದರೂ ಸಹ ಇಂದಿಗೂ ಕೆಲವೊಂದು ಸರ್ಕಾರೀ ಇಲಾಖೆಗಳು ಈ ಕಾರುಗಳನ್ನು ಬಳಸುತ್ತಿವೆ. ಸಿಕೆ ಬಿರ್ಲಾ ಸಮೂಹದ ಹಿಂದೂಸ್ತಾನ್ ಮೋಟರ್ಸ್ ಉತ್ಪಾದಿಸುತ್ತಿದ್ದ ಅಂಬಾಸಡರ್ ಕಾರುಗಳು ಬ್ರಿಟನ್‌ನ ಮಾರಿಸ್ ಆಕ್ಸ್‌ಫೋರ್ಡ್ ಕಾರಿನ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿತ್ತು.
ದೇಶದಲ್ಲಿ ಉತ್ಪಾದನೆಗೊಂಡ ಮೊದಲ ಕಾರು ಎಂಬ ಹೆಗ್ಗಳಿಕೆ ಪಡೆದಿದ್ದ ಅಂಬಾಸಡರ್ 1980ರ ದಶಕಕ್ಕೂ ಮೊದಲ ದೇಶದ ರಸ್ತೆಗಳನ್ನು ಅಕ್ಷರಶಃ ಆಳುತ್ತಿತ್ತು. ಆದರೆ 1980ರ ಮಧ್ಯದಲ್ಲಿ ಬಂದ ಮಾರುತಿ ಸುಜ಼ುಕಿ 800 ಕಾರು ಅಂಬಾಸಿಡರ್‌ನ ನಾಗಾಲೋಟಕ್ಕೆ ಬ್ರೇಕ್ ಕೊಟ್ಟಿತು.
“ಇವತ್ತು ಸೋಮವಾರ ! ಕೆಲಸಕ್ಕೆ ಸಜ್ಜಾಗೋಣ ! ನನ್ನ ಬಳಿಯೂ ಒಂದು ಅಂಬಾಸಡರ್ ಇದೆ,” ಎಂದು ಬಿಜೆಪಿ ನಾಯಕ ತಮ್ಮ ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ.
“ಈ ಕಾರು ಎಲ್ಲರಿಗೂ ಒಂದು ಎಮೋಷನ್,” ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
https://twitter.com/AlongImna/status/1645286562765193216?ref_src=twsrc%5Etfw%7Ctwcamp%5Etweetembed%7Ctwterm%5E1645286562765193216%7Ctwgr%5Ec3ce437423c151643cbdae54b57f0020473dfa3a%7Ctwcon%5Es1_&ref_url=https%3A%2F%2Fwww.ndtv.com%2Foffbeat%2Femotion-to-all-nagaland-minister-temjen-imna-alongs-pic-with-ambassador-car-goes-viral-3934707