ಭಾರತಕ್ಕೆ ‘ದ್ರೋಹ’ ಮಾಡಿ ಚೀನಾಕ್ಕೆ ಹಾರಿದ ಎಲೋನ್‌ ಮಸ್ಕ್‌; ಟೆಸ್ಲಾ ಕಾರುಗಳ ಮಾರಾಟಕ್ಕೆ ಮಾಸ್ಟರ್‌ ಪ್ಲಾನ್!‌

ಭಾರತದ ಗ್ರಾಹಕರು ಟೆಸ್ಲಾ ಕಾರುಗಳಿಗಾಗಿ ಇನ್ನಷ್ಟು ದಿನ ಕಾಯಬೇಕಾಗಬಹುದು. ನಿರೀಕ್ಷೆಯಂತೆ ಟೆಸ್ಲಾ ಸಿಇಓ ಎಲೋನ್ ಮಸ್ಕ್ ಈ ತಿಂಗಳು ಭಾರತಕ್ಕೆ ಬರಬೇಕಿತ್ತು, ಆದರೆ ತಮ್ಮ ಭಾರತ ಪ್ರವಾಸವನ್ನು ರದ್ದುಗೊಳಿಸಿದ ಅವರು ಚೀನಾಕ್ಕೆ ಹಾರಿದ್ದಾರೆ. ಚೀನಾದಲ್ಲಿ ಟೆಸ್ಲಾ ಕಾರುಗಳ ಮೇಲಿನ ನಿಷೇಧದ ನಡುವೆಯೇ ಅಲ್ಲಿಗೆ ಭೇಟಿ ನೀಡಿದ ಎಲೋನ್ ಮಸ್ಕ್, ಪ್ರಧಾನಿ ಲಿ ಕಿಯಾಂಗ್ ಅವರನ್ನು ಸಹ ಭೇಟಿಯಾದರು. ಈ ಭೇಟಿಯ ಮೂಲಕ ಚೀನಾದಲ್ಲಿ ಟೆಸ್ಲಾ ಕಾರುಗಳ ಮೇಲಿದ್ದ ನಿಷೇಧವನ್ನು ತೆಗೆದುಹಾಕುವಲ್ಲಿ ಎಲೋನ್‌ ಮಸ್ಕ್ ಯಶಸ್ವಿಯಾಗಿದ್ದಾರೆ.

ವಾಸ್ತವವಾಗಿ ಚೀನಾ ಟೆಸ್ಲಾ ಕಾರುಗಳನ್ನು ನಿಷೇಧಿಸಿತ್ತು. ಚೀನಾದ ಮೇಲೆ ಹದ್ದಿನ ಕಣ್ಣಿಡಲು ಟೆಸ್ಲಾ ಕಾರುಗಳನ್ನು ಬಳಸಬಹುದು ಎಂಬುದು ಆ ದೇಶದ ಆತಂಕ. ಹಾಗಾಗಿಯೇ ಚೀನಾದಲ್ಲಿ ಸೂಕ್ಷ್ಮ ಪ್ರದೇಶಗಳಿಗೆ ಟೆಸ್ಲಾ ಕಾರುಗಳನ್ನು ಕೊಂಡೊಯ್ಯಲು ನಿಷೇಧವಿತ್ತು. ಈ ನಿಷೇಧವು ಟೆಸ್ಲಾ ಕಾರುಗಳ ಮಾರಾಟದ ಮೇಲೆ ನಕಾರಾತ್ಮಕ ಪರಿಣಾಮ ಬೀರಿತು. ಚೀನಾದಂತಹ ಪ್ರಮುಖ ವಾಹನ ಮಾರುಕಟ್ಟೆಯಲ್ಲಿ ಟೆಸ್ಲಾಗೆ ಈ ನಷ್ಟವನ್ನು ಸಹಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಈ ನಿಷೇಧವನ್ನು ತೆಗೆದುಹಾಕಲು ಎಲೋನ್ ಮಸ್ಕ್ ಸ್ವತಃ ಚೀನಾ ತಲುಪಿದರು.

ಟೆಸ್ಲಾದ ಪೂರ್ಣ-ಸ್ವಯಂ ಚಾಲನಾ ಸಾಫ್ಟ್‌ವೇರ್ ಚೀನಾದ ಪ್ರಮುಖ ಪರೀಕ್ಷೆಯಲ್ಲಿ ಉತ್ತೀರ್ಣವಾಗಿದೆ. ಚೀನಾದಲ್ಲಿ ಟೆಸ್ಲಾದ ಚಾಲಕ-ಸಹಾಯ ವ್ಯವಸ್ಥೆಯನ್ನು ಪರಿಚಯಿಸಲು ಅನುಮತಿಯನ್ನು ಸ್ವೀಕರಿಸಲಾಗಿದೆ. ಟೆಸ್ಲಾ ಕಾರುಗಳ ಮ್ಯಾಪಿಂಗ್ ಮತ್ತು ನ್ಯಾವಿಗೇಷನ್ ಕಾರ್ಯಗಳಿಗಾಗಿ ಚೈನೀಸ್ ಟೆಕ್ ದೈತ್ಯ ಬೈದು ಇಂಕ್ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಕಂಪನಿಯು ಚೀನಾದ ಪ್ರಮುಖ ಡೇಟಾ-ಭದ್ರತೆ ಮತ್ತು ಗೌಪ್ಯತೆ ಅಗತ್ಯವನ್ನು ಸಹ ಅಂಗೀಕರಿಸಿದೆ.

ಎಲೋನ್ ಮಸ್ಕ್ ಕಂಪನಿ ಚೀನಾದಲ್ಲಿ 17 ಲಕ್ಷಕ್ಕೂ ಹೆಚ್ಚು ಟೆಸ್ಲಾ ಕಾರುಗಳನ್ನು ಮಾರಾಟ ಮಾಡಿದೆ. 2020 ರಲ್ಲಿ ಚೀನಾದ ಶಾಂಘೈನಲ್ಲಿ 7 ಶತಕೋಟಿ ಡಾಲರ್‌ ವೆಚ್ಚದಲ್ಲಿ EV ಕಾರುಗಳನ್ನು ತಯಾರಿಸಲು ಟೆಸ್ಲಾ ಅತಿದೊಡ್ಡ ಕಾರ್ಖಾನೆಯನ್ನು ಸ್ಥಾಪಿಸಿತ್ತು.

ಎಲೋನ್ ಮಸ್ಕ್ ಭಾರತದ ಮೇಲೆ ಕೂಡ ಕಣ್ಣಿಟ್ಟಿದ್ದಾರೆ. ಭಾರತದಲ್ಲಿ ಟೆಸ್ಲಾ ಕಾರುಗಳ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಅವರು ಭಾರತಕ್ಕೆ ಬರಲು ಹೊರಟಿದ್ದರು. ಟೆಸ್ಲಾ ಭಾರತದಲ್ಲಿ 2 ರಿಂದ 3 ಬಿಲಿಯನ್ ಡಾಲರ್ ಅಂದರೆ 25 ಸಾವಿರ ಕೋಟಿ ರೂಪಾಯಿವರೆಗೆ ಹೂಡಿಕೆ ಮಾಡಲಿದೆ. ಇವಿ ಕಾರುಗಳ ಹೊರತಾಗಿ, ಉಪಗ್ರಹ ಸಂವಹನಕ್ಕಾಗಿ ಮಸ್ಕ್ ಅರ್ಜಿ ಸಲ್ಲಿಸಿದ್ದಾರೆ. ಈಗ ಭಾರತದ ಯೋಜನೆಯನ್ನು ರದ್ದುಗೊಳಿಸಿ ಚೀನಾ ತಲುಪಿದ ಟೆಸ್ಲಾ ಮಾಲೀಕರ ನಡೆ ಕುತೂಹಲ ಮೂಡಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read