ವಾಷಿಂಗ್ಟನ್ (ಯುಎಸ್): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತದಿಂದ ನಿರ್ಗಮಿಸುತ್ತಿರುವುದಾಗಿ ಎಲೋನ್ ಮಸ್ಕ್ ಅವರು ಘೋಷಣೆ ಮಾಡಿದ್ದಾರೆ.
ಅವರು ತಮ್ಮ ಸಾಮಾಜಿಕ ಮಾಧ್ಯಮ ವೆಬ್ಸೈಟ್ X ನಲ್ಲಿ ಪೋಸ್ಟ್ನಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ.
‘’ವಿಶೇಷ ಸರ್ಕಾರಿ ಉದ್ಯೋಗಿಯಾಗಿ ನನ್ನ ನಿಗದಿತ ಸಮಯ ಕೊನೆಗೊಂಡಿದೆ. ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡಲು ಅವಕಾಶ ನೀಡಿದ್ದಕ್ಕಾಗಿ ಅಧ್ಯಕ್ಷ @realDonaldTrump ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ” ಎಂದು ಮಸ್ಕ್ ಬರೆದಿದ್ದಾರೆ. “@DOGE ಮಿಷನ್ ಕಾಲಾನಂತರದಲ್ಲಿ ಬಲವಾಗಲಿದೆ ಎಂದು ಬರೆದುಕೊಂಡಿದ್ದಾರೆ.
ಸಿಬಿಎಸ್ ಸಂದರ್ಶನದ ಒಂದು ಭಾಗವನ್ನು ಬಿಡುಗಡೆ ಮಾಡಿದ ಒಂದು ದಿನದ ನಂತರ ಮಸ್ಕ್ ತಮ್ಮ ನಿರ್ಧಾರವನ್ನು ಘೋಷಿಸಿದರು, ಅದರಲ್ಲಿ ಅವರು ಟ್ರಂಪ್ ಅವರ ಶಾಸಕಾಂಗ ಕಾರ್ಯಸೂಚಿಯ ಕೇಂದ್ರಬಿಂದುವನ್ನು ಟೀಕಿಸಿದರು, ಅಧ್ಯಕ್ಷರು ತಮ್ಮ “ದೊಡ್ಡ ಸುಂದರ ಮಸೂದೆ” ಎಂದು ಕರೆಯುವುದರಿಂದ “ನಿರಾಶೆಗೊಂಡಿದ್ದಾರೆ” ಎಂದು ಹೇಳಿದರು.
As my scheduled time as a Special Government Employee comes to an end, I would like to thank President @realDonaldTrump for the opportunity to reduce wasteful spending.
— Elon Musk (@elonmusk) May 29, 2025
The @DOGE mission will only strengthen over time as it becomes a way of life throughout the government.