BIG NEWS : ‘ಟ್ರಂಪ್’ ಪ್ರಮಾಣ ವಚನ ಸ್ವೀಕಾರದ ವೇಳೆ ಕುಣಿದು ಕುಪ್ಪಳಿಸಿದ ‘ಎಲಾನ್ ಮಸ್ಕ್’ : ವಿಡಿಯೋ ವೈರಲ್ |WATCH VIDEO

ವಾಷಿಂಗ್ಟನ್ : ಅಮೆರಿಕದ 47ನೇ ಅಧ್ಯಕ್ಷರಾಗಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು .ತಮ್ಮ ಉದ್ಘಾಟನಾ ಭಾಷಣದಲ್ಲಿ, ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಸುವರ್ಣ ಯುಗವು ಇಂದಿನಿಂದ ಪ್ರಾರಂಭವಾಗುತ್ತದೆ ಎಂದು ಹೇಳಿದರು.

ಟ್ರಂಪ್ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ಹಿನ್ನೆಲೆ ಟೆಸ್ಲಾ ಒಡೆಯ ಎಲಾನ್ ಮಸ್ಕ್ ಸಂಭ್ರಮಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಟ್ರಂಪ್ ಪ್ರಮಾಣ ವಚನಕ್ಕೂ ಮುನ್ನ ಎಲಾನ್ ಮಸ್ಕ್ ಕುಣಿದು ಕುಪ್ಪಳಿಸಿದ್ದಾರೆ.”ಇದು ಸಾಮಾನ್ಯ ಗೆಲುವು ಅಲ್ಲ ಎಂದು ಟ್ರಂಪ್ ಅವರ ಆಪ್ತ ಮಿತ್ರ ಮಸ್ಕ್ ಹೇಳಿದರು.

ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಡೊನಾಲ್ಡ್ ಟ್ರಂಪ್ ತಮ್ಮ ಭಾಷಣವನ್ನು “ಅಮೆರಿಕದ ಸುವರ್ಣಯುಗ ಈಗಿನಿಂದ ಪ್ರಾರಂಭವಾಗುತ್ತದೆ” ಎಂದು ಹೇಳುವ ಮೂಲಕ ಪ್ರಾರಂಭಿಸಿದ್ದಾರೆ.‘ಅಮೆರಿಕದ ಅವನತಿ ಮುಗಿದಿದೆ’ ಎಂದು ಅವರು ಹೇಳಿದ್ದು, ಚೀನಾದಿಂದ ಹಿಡಿದು ಗಡಿ ಸಮಸ್ಯೆಗಳವರೆಗೆ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.ಅಮೆರಿಕ ಶೀಘ್ರದಲ್ಲೇ ಹಿಂದೆಂದಿಗಿಂತಲೂ ಹೆಚ್ಚು ಶ್ರೇಷ್ಠ, ಬಲಶಾಲಿ ಮತ್ತು ಅಸಾಧಾರಣ ದೇಶವಾಗಲಿದೆ. ರಾಷ್ಟ್ರೀಯ ಯಶಸ್ಸಿನ ರೋಮಾಂಚಕ ಹೊಸ ಯುಗದ ಆರಂಭದಲ್ಲಿ ನಾವು ಇದ್ದೇವೆ ಎಂಬ ವಿಶ್ವಾಸ ಮತ್ತು ಆಶಾವಾದದೊಂದಿಗೆ ನಾನು ಅಧ್ಯಕ್ಷ ಸ್ಥಾನಕ್ಕೆ ಮರಳುತ್ತೇನೆ ಎಂದಿದ್ದಾರೆ.

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read