ವಿಧಾನಸಭೆ ಉಪ ಚುನಾವಣೆ ಮುಂದೂಡಿಕೆ: ನ. 13ರ ಬದಲು 20ರಂದು ಮತದಾನ ದಿನಾಂಕ ಮರುನಿಗದಿ

ನವದೆಹಲಿ: ಕೆಲವು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ಮುಂದೂಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಉತ್ತರ ಪ್ರದೇಶ, ಪಂಜಾಬ್ ಕೇರಳದಲ್ಲಿ ವಿಧಾನಸಭೆಯ ಕೆಲವು ಕ್ಷೇತ್ರಗಳ ಉಪಚುನಾವಣೆಯನ್ನು ನವೆಂಬರ್ 13ರ ಬದಲು ನವೆಂಬರ್ 20ರಂದು ನಡೆಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.

ಈ ರಾಜ್ಯಗಳಲ್ಲಿ ಹಬ್ಬಗಳು ಇರುವ ಕಾರಣ ಚುನಾವಣೆ ಮುಂದೂಡಲಾಗಿದೆ. ಕೇರಳದ 1, ಪಂಜಾಬ್ ನ 4, ಉತ್ತರ ಪ್ರದೇಶದ 9 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯ ದಿನಾಂಕವನ್ನು ಮರು ನಿಗದಿ ಮಾಡಲಾಗಿದೆ. ವಿವಿಧ ಪಕ್ಷಗಳು ಹಬ್ಬದ ಕಾರಣ ಮತದಾನದ ದಿನಾಂಕ ಮರು ನಿಗದಿ ಮಾಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡು ಮತದಾನದ ದಿನಾಂಕವನ್ನು ಮುಂದೂಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read